ವೀಣಾ ಕಾರಂತ್ ಅವರು ತೀರ್ಥಹಳ್ಳಿ ಸಮೀಪದ ಹೇರಂಬಪುರದವರು. ಅವರ ಆರಂಭಿಕ ಮತ್ತು ಕಾಲೇಜು ಶಿಕ್ಷಣ ಹೊಸನಗರದಲ್ಲಿ ಪೂರ್ಣಗೊಳಿಸಿದರು. ಬಾಲ್ಯದಿಂದಲೇ ಓದು, ನೃತ್ಯ, ಬರವಣಿಗೆ, ಆಟಗಳಲ್ಲಿ ಸದಾ ಮುಂದಿದ್ದರು ಅಂದಿನಿಂದಲೇ ಬರವಣಿಗೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಭಾವಗೀತೆ, ಭಕ್ತಿ ಗೀತೆ, ಜನಪದ ಶೈಲಿಯ ಗೀತೆಗಳು ರಚಿಸಿ ಹಾಡಿದ್ದಾರೆ. ಸಾಕಷ್ಟು ಪತ್ರಿಕೆಗಳಲ್ಲಿ ಅವರ ಕವನ, ಕಥೆ, ಲೇಖನಗಳು ಪ್ರಕಟವಾಗಿವೆ. ಸಮಾಜ ಸೇವೆಯನ್ನು ಹವ್ಯಾಸವಾಗಿ ಮಾಡಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.