About the Author

ಕಥೆಗಾರ್ತಿ, ಕಾದಂಬರಿಗಾರ್ತಿ ಅನಸೂಯಾದೇವಿ ಅವರು ಸಂಗೀತ ವಿದುಷಿ. ಅವರು 1949 ಅಕ್ಟೋಬರ್‌ 31 ರಂದು ಜನಿಸಿದರು.  ಇವರು ಮೂಲತಃ ಬೆಂಗಳೂರಿನ ಬನಶಂಕರಿಯವರು.  ತಂದೆ ತಿಮ್ಮಯ್ಯ ಅಡಿಗ, ತಾಯಿ ಕಾವೇರಮ್ಮ.  ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟಗೊಂಡಿವೆ. ಎಲ್ಲಾ ಪ್ರಕಾರದ ಬರಹಗಳು ಸುಮಾರು 430 ಕ್ಕೂ ಹೆಚ್ಚು ಪ್ರಕಟಗೊಂಡಿವೆ. ಕಾವ್ಯ : ’ಪ್ರಕೃತಿ ಪುರುಷ, ಕೇಶವ ನಮನ, ಅಮ್ಮ ನಿನ್ನ ನೆನಪಿಗೆ, ಅನನ್ಯ’ ಅವರ ಕಾವ್ಯ ಕೃತಿಗಳು. ’ಡಾ. ಅನಸೂಯಾದೇವಿಯವರ ಸಮಗ್ರ ಕತೆಗಳು, ದೀಪದ ಕೆಳಗೆ, ಉರಿಯ ಬೇಲಿ, ಅನಸೂಯ ಕತೆಗಳು’ ಅವರ ಕಥಾ ಸಂಕಲನ. ’ಆಕಾಶದ ಹಾಡು, ಕಾಡ ಬೆಳದಿಂಗಳು’ ಅವರ ಪ್ರಮುಖ ಕಾದಂಬರಿ. ’ಸಂಕಟವೇ ನಿಲ್ಲು ಸಾಧನೆಯಾಗು’ ಅನುವಾದ ಕೃತಿ. ಅವರ ಸಾಹಿತ್ಯ ಸೇವೆಗೆ ’ಗೊರೂರು ಸಾಹಿತ್ಯ ಪ್ರಶಸ್ತಿ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ವಿಶ್ವಮಾನ್ಯ ಪ್ರಶಸ್ತಿ’ಗಳು ಅವರಿಗೆ ಸಂದಿವೆ. 

 

ಅನಸೂಯಾದೇವಿ

(31 Oct 1949)