About the Author

ಲೇಖಕ ಷಕೀಬ್ ಎಸ್. ಕಣದ್ಮನೆ ನವಿಲೇಹಾಳ್ ಮೂಲತಃ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲೂಕಿನ ನವಿಲೇಹಾಳ್ ಗ್ರಾಮದವರು. ತಂದೆ - ಷಂಷು ಕೆ. ಬಿ., ತಾಯಿ - ಪರ್ವಿನ್ ಹೆಚ್. ಇವರದು ರೈತ ಕುಟುಂಬ. ಸಿರಿಗೇರಿಯ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ತರ್ಕಶಾಸ್ತ್ರ ವಿಷಯದಲ್ಲಿ ಶಿಕ್ಷಣ, ದಾವಣಗೆರೆಯ ಸರ್ಕಾರಿ ಪ್ರಥಮದರ್ಜೆ ಕಾಲೇನಲ್ಲಿ ಪದವಿ ಹಾಗೂ ದಾವಣಗೆರೆ ವಿ.ವಿ.ಯಿಂದ ಸ್ನಾತಕೋತ್ತರ ಪದವೀಧರರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಜಾನಪದ ಅಧ್ಯಯನ ವಿಭಾಗದಲ್ಲಿ ಈಗ ಸಂಶೋಧನಾ ವಿದ್ಯಾರ್ಥಿ. ‘ಮೋಹದ ಮೋಡಗಳು’ ಅವರ ಚೊಚ್ಚಲ ಕವನ ಸಂಕಲನ.

ಷಕೀಬ್ ಎಸ್. ಕಣದ್ಮನೆ ನವಿಲೇಹಾಳ್