’ಶಿಶಿರ’ ಕಾವ್ಯನಾಮದ ಮೂಲಕ ಹೆಸರಾಗಿರುವ ಎಸ್.ಶಿಶಿರಂಜನ್ ಜನಿಸಿದ್ದು 1989 ಮಾರ್ಚ್ 5 ರಂದು ಮೈಸೂರಿನ ದೊಡ್ಡಮಾರಗೌಡನಹಳ್ಳಿಯಲ್ಲಿ. ತಂದೆ ಶಂಕರನಾರಾಯಣ, ತಾಯಿ ಲಲಿತ.
ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರ ಕೃತಿಗಳೆಂದರೆ ಸಂವೇದನೆ(ಕವನ ಸಂಕಲನ), ಇದೆಂಥಾ ದೇಶಪ್ರೇಮ ರೀ?! (ನಾಟಕ), ಅವ್ವ(ಹನಿಗವಿತೆಗಳು), ಲಂಕೇಶನ ತಲೆಗಳು(ಖಂಡಕಾವ್ಯ). ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಕೆ.ವಿ. ರತ್ನಮ್ಮ ದತ್ತಿ ಪ್ರಶಸ್ತಿ, ರಂಗ ಪ್ರತಿಭಾ ಸನ್ಮಾನ ಹಾಗೂ ಸ್ಪಂದನಶ್ರೀ ಪ್ರಶಸ್ತಿ ಲಭಿಸಿದೆ.