ಹಳಗನ್ನಡ ಮತ್ತು ನಡುಗನ್ನಡ ಕಾಲಕ್ಕೆ ಸೇರಿದ ಅಪ್ರಕಟಿತ ಕಾವ್ಯಗಳನ್ನು ಗ್ರಂಥ ಸಂಪಾದನಾ ಶಾಸ್ತ್ರ ನಿಯಮಕ್ಕೆ ಅನುಗುಣವಾಗಿ ಸಂಪಾದಿಸಿ ಅದಕ್ಕೆ ಉಪಯುಕ್ತ ವಾದ ಪೀಠಿಕೆ ಮತ್ತು ಅನುಬಂಧಗಳೊಡನೆ ಮುದ್ರಣಕ್ಕೆ ಸಿದ್ಧಪಡಿಸಿಕೊಟ್ಟರೆ ಅದನ್ನು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸುತ್ತದೆ' ಎಂದು ಇಡೀ ನಾಡಿಗೆ ಒಂದು ಕರೆಯನ್ನು 1978ರಲ್ಲಿ ಕೊಡಲಾಯಿತು. ಅದರಂತೆ ಕೆಲವು ವಿದ್ವಾಂಸರು ಅಪ್ರಕಟಿತ ಕಾವ್ಯಗಳನ್ನು ಅಚ್ಚುಕಟ್ಟಾಗಿ ಮುದ್ರಣಕ್ಕೆ ಅಣಗೊಳಿಸಿಕೊಟ್ಟಿದ್ದಾರೆ. ಈಗಾಗಲೇ ಈ ಮಾಲೆಯಲ್ಲಿ ಕೆಲವು ಪುಸ್ತಕಗಳು ಪ್ರಕಟವಾಗಿದ್ದು ಇದೀಗ ಕುಮುದೇಂದು ಕವಿಯು ರಾಮಾಯಣ ಕಾವ್ಯ ಪ್ರಕಟವಾಗುತ್ತಿದೆ ಕುಮುದೇಂದು ಕವಿಯ ಈ ರಾಮಾಯಣ ಕಾವ್ಯಕ್ಕೆ ಕನ್ನಡದಲ್ಲಿ ಪ್ರಕಟವಾಗಿರುವ ರಾಮಾಯಣ ಸಂಬಂಧವಾದ ಕಾವ್ಯಗಳಲ್ಲಿ ಪ್ರಮುಖಸ್ಥಾನವಿದೆ. ತೌಲನಿಕ ಅಧ್ಯಯನಕ್ಕೆ ಈ ಕಾವ್ಯ ವಿಶೇಷ ಸಾಮಗ್ರಿ ಒದಗಿಸಿಕೊಡುತ್ತದೆ. ಜತೆಗೆ ಷಟ್ಟದಿ ಛಂದಸ್ಸಿನ ಸಮಗ್ರ ವ್ಯಾಸಂಗಕ್ಕೆ ಕುಮುದೇಂದು ಕವಿಯ ಕೃತಿ ಹೆಚ್ಚಿನ ಮಾಹಿತಿಗಳನ್ನು ನೀಡು ಇದೆ. ಜೈನ ರಾಮಾಯಣಗಳ ಶ್ರೇಣಿಯಲ್ಲಿ ಮಹತ್ವದ ಸ್ಥಾನ ಪಡೆದಿರುವ ಈ ಕಾವ್ಯದ ಅಸಮಗ್ರಭಾಗವನ್ನು ಹಿರಿಯ ವಿದ್ವಾಂಸರಾಗಿದ್ದ ದಿವಂಗತ ಕೆ. ಜಿ. ಕುಂದಣಗಾರರು ಪ್ರಕಟಿಸಿದ್ದರು. ಇದರ ಸಮಗ್ರ ಆವೃತ್ತಿ ಇದೀಗ ಮೊದಲಬಾರಿಗೆ ಹೊರಬರುತ್ತಿದೆ ಎಂದು ಹಂಪ ನಾಗರಾಜಯ್ಯ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ಡಾ. ಪಿ. ವಿ. ನಾರಾಯಣ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರವಾಚಕರಾಗಿದ್ದರು. ತಂದೆ ಪಿ.ವೆಂಕಪ್ಪಯ್ಯ, ತಾಯಿ ನರಸಮ್ಮ. ಬೆಂಗಳೂರಿನಲ್ಲಿ 1942ರ ಡಿ.18 ರಂದು ಹುಟ್ಟಿದರು. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), “ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ.. ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ ಮೊದಲಾದ 16ಕೃತಿಗಳು. ಸಂಪಾದಿತ-ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ ಮೊದಲಾದ 5 ಕೃತಿಗಳು. ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ ಮುಂತಾದ 12 ಕೃತಿಗಳು. ಕಾದಂಬರಿಗಳು-ಸಾಮಾನ್ಯ, ...
READ MORE