ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ತಾಲ್ಲೂಕಿನ ಕೂಡೂರಿನವರಾದ ಸಾಹಿತಿ ಕೆ. ಚಿನ್ನಪ್ಪ ಗೌಡ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮದ್ರಾಸ್ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬಿ.ಎ.ವಿವೇಕ ರೈ ಅವರ ಮಾರ್ಗದರ್ಶನದಲ್ಲಿ ’ಭೂತಾರಾಧನೆ- ಜಾನಪದೀಯ ಅಧ್ಯಯನ’ ವಿಷಯದಲ್ಲಿ ಪಿಎಚ್‌ಡಿ ಪಡೆದಿದ್ದಾರೆ.
ಇವರ ಪ್ರಮುಖ ಕೃತಿಗಳೆಂದರೆ ಜಾಲಾಟ, ಭೂತಾರಾಧನೆ, ಭೂತಾರಾಧನೆ - ಜಾನಪದೀಯ ಅಧ್ಯಯನ, ಸಂಸ್ಕೃತಿ ಸಿರಿ, ಗೌಡ ಸಂಸ್ಕೃತಿ ಮತ್ತು ಆಚರಣೆಗಳು, ಸೇರಿಗೆ, ಕಿತ್ತಲೆ ಹಣ್ಣಲ್ಲ ಮುಂತಾದವು.