About the Author

ಲೋಕೇಶ್ ಕಲ್ಕುಣಿ ಅವರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದವರು. ತಂದೆ ಮಹದೇವ, ತಾಯಿ ಸಿದ್ದಮ್ಮ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಡಿ.ಎಡ್ ಶಿಕ್ಷಣ ತರಬೇತಿಯನ್ನು ಸಹ ಪಡೆದು ಶಿಕ್ಷಕರಾಗಿ ಸೇವೆಯನ್ನು ಮಾಡಿರುತ್ತಾರೆ. 2007ರಲ್ಲಿ ಪೊಲೀಸ್ ಪೇದೆಯಾಗಿ ಆಯ್ಕೆಗೊಂಡಿದ್ದು, ಪ್ರಸ್ತುತ ಮಂಡ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ.

ಲೋಕೇಶ್ ಕಲ್ಕುಣಿ

Books by Author