About the Author

ಮಧು ಕೋಡನಾಡು ಅವರು ಮೂಲತಃ ಮಲೆನಾಡಿನವರಾಗಿದ್ದು, ವೃತ್ತಿಯಲ್ಲಿ ಸರ್ಕಾರಿ ಉದ್ಯೋಗಿ. ಕುವೆಂಪು ಅವರ ಕುಪ್ಪಳ್ಳಿಗೆ ಅತೀ ಸಮೀಪದಲ್ಲಿರುವ ನರಸಿಂಹರಾಜಪುರದಲ್ಲಿ ಜನಿಸಿದ ಇವರು ತಮ್ಮ ಶಿಕ್ಷಣವನ್ನು ನರಸಿಂಹರಾಜಪುರ, ಶಿವಮೊಗ್ಗ ಹಾಗೂ ಕುವೆಂಪು ವಿಶ್ವವಿದ್ಯಾಲಯಗಳಲ್ಲಿಯೇ ಮುಗಿಸಿಕೊಂಡರು. ಇವರು ನಂತರದಲ್ಲಿ ಬೆಂಗಳೂರಿನಲ್ಲಿ ವಾಸಿಸಲಾರಂಭಿಸಿದರು. ಅತ್ಯಂತ ಸೂಕ್ಷ್ಮ ಕಾವ್ಯ ಸಂವೇದನೆಯನ್ನು ಹೊಂದಿರುವ ಇವರ ಸಾಕಷ್ಟು ಕವಿತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಜನಪ್ರಿಯವಾಗಿವೆ. ಇವುಗಳ ಪೈಕಿ ಆಯ್ದ ಕವಿತೆಗಳ ಸಂಕಲನವೇ ಇವರ ಚೊಚ್ಚಲ ಕೃತಿ ‘ಕನ್ನಡಿ’. ಇದಲ್ಲದೇ, ಇವರ ಸುಮಾರು 30 ಕ್ಕೂ ಹೆಚ್ಚು ಕವಿತೆಗಳು ನಾಡಿನ ಹೆಸರಾಂತ ಸಂಯೋಜಕರು ಹಾಗೂ ಗಾಯಕರುಗಳಾದ ಪುತ್ತೂರು ನರಸಿಂಹ ನಾಯಕ್, ರಾಘವೇಂದ್ರ ಬೀಜಾಡಿ ಮೊದಲಾದವರ ಸಂಯೋಜನೆಯಲ್ಲಿ ಭಾವಗೀತೆಗಳಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಸರ್ಕಾರಿ ವೃತ್ತಿಯ ಜೊತೆಗೆ ಕವಿತೆ ಕಟ್ಟುವ ಪ್ರವೃತ್ತಿಯನ್ನು ಬಿಡದೇ ರೂಢಿಸಿಕೊಂಡಿರುವ ಇವರು ಪ್ರಸ್ತುತ ವಿದ್ಯುಮಾನಗಳ, ಆಧ್ಯಾತ್ಮಿಕತೆ ಹೊಂದಿರುವ ಹಾಗೂ ವಿಡಂಬನಾತ್ಮಕ ಕವಿತೆಗಳನ್ನು ಕಟ್ಟುವುದರಲ್ಲಿ ಸಶಕ್ತರು. ಮೂಲತ: ವಿಜ್ಞಾನದ ವಿದ್ಯಾರ್ಥಿಯಾಗಿದ್ದರೂ, ಕನ್ನಡ ಸಾಹಿತ್ಯದಲ್ಲಿ ಅಭಿರುಚಿಯನ್ನು ಬೆಳೆಸಿಕೊಂಡು, ವೃತ್ತಿ ಪ್ರವೃತ್ತಿಗಳೆರಡಕ್ಕೂ ಸಮಾನ ಪ್ರಾಶಸ್ತ್ಯ ನೀಡುತ್ತಾ ಮುಂದುವರೆಯುತ್ತಿರುವುದು ಇವರ ವಿಶೇಷ.

ಕೃತಿ: ಕನ್ನಡಿ(ಕವನ ಸಂಕಲನ)

ಮಧು ಕೋಡನಾಡು

Books by Author