ಕವಿ ಡಿ.ಬಿ.ಢಂಗ ಅವರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಚಿಕಾಲಗುಡ್ಡ (ಜನನ: 01-06-1960) ಗ್ರಾಮದವರು. ಬಿ.ಎಸ್.ಸಿ, ಬಿ.ಎಡ್, ಹಾಗೂ ಡಿಎಂಸಿ ಪದವೀಧರರು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಪ್ರೃತ್ತಿಯಿಂದ ಚಿತ್ರಕಲಾವಿದರು.
ಕವನ ಸಂಕಲನಗಳು: ನಕ್ಷತ್ರಗಳು (1985), ಕಣ್ಣು ಹೊಡೆ (1989), ಕುಡಗೋಲು (1992), ನಿರೀಕ್ಷೆ (1992), ಸಾಗಿದೆ ಪ್ರಪಂಚ (2005), ಅರ್ಥ -ಅನರ್ಥ (2013), ಕಾಲದ ಗತಿ (2020) , ವಿಮರ್ಶೆ ಕೃತಿ: ಕಾವ್ಯ ನೋಟ (2003) ಇತರೆ: ಜನಾಂಗ ಪರಿಚಯ (1988),
ಪ್ರಶಸ್ತಿಗಳು: ಸಂಕ್ರಮಣ ಸಾಹಿತ್ಯ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದ ಬಹುಮಾನ(1994), ‘ಸಾಗಿದೆ ಪ್ರಪಂಚ’ ಕೃತಿಗೆ 2006ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರತ್ನಾಕರ ವರ್ಣಿ-ಮುದ್ಧಣ -ಅನಾಮಿಕ ದತ್ತಿ ಪ್ರಶಸ್ತಿ ಹಾಗೂ ಪುಟ್ಟರಾಜ ಸಾಹಿತ್ಯ ಪುರಸ್ಕಾರ, ಹುಬ್ಬಳ್ಳಿಯ ರಾಧಾಕೃಷ್ಣ ಕಲಾ ಅಕಾಡೆಮಿ, ಬಾಲ ವಿಕಾಸ ಅಕಾಡೆಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ 33ನೇ ವರ್ಷದ ಸಾಹಿತ್ಯ ಕ್ಷೇತ್ರದ `ದಶಕಗಳ ಸಾಧಕರು-2020' ಪ್ರಶಸ್ತಿ ಲಭಿಸಿದೆ. ರಾಜ್ಯದೆಲ್ಲೆಡೆ ಜರುಗಿದ ವಿಚಾರ ಸಂಕಿರಣ, ಸಮ್ಮೇಳನ, ಕಮ್ಮಟ-ಶಿಬಿರಗಳಲ್ಲಿ ಪಾಲ್ಗೊಂಡಿದ್ದು, ಸದ್ಯ, ಧಾರವಾಡದಲ್ಲಿದ್ದು, ನವೀನಚಂದ್ರ ಸಾಹಿತ್ಯ ತ್ರೈಮಾಸಿಕದ ಸಂಪಾದಕರೂ ಆಗಿದ್ದಾರೆ.