.ದಿ. ಎನ್. ಜಮಾಲ್ ಖಾನ್ ಹಾಗೂ ದಿ. ಬಿ. ಸೋಫಿಯಾ ದಂತಿಯ ಪುತ್ರ ಜೆ. ಕಲೀಂ ಬಾಷ. ದಾವಣಗೆರೆ ಜಿಲ್ಲೆಯ ಹರಿಹರ ಮೂಲದವರು.
ಶಾಹಿನಾ ಮತ್ತು ಇತರ ಕವಿತೆಗಳು (1987), ಮನೆಯಲ್ಲಿ ಬೆಳದಿಂಗಳು (ಮಕ್ಕಳ ಸಚಿತ್ರ ಕವನ ಸಂಕಲನ-2001 ಹಾಗೂ 2010), ಗುಜರಾತಿನಲ್ಲಿ ಗಾಂಧೀ ಆತ್ಮ (ಕವನ ಸಂಕಲನ-2002) ಬರೆದಿದ್ದಾರೆ.
ಇವರ ಪ್ರೆಸ್ ರಿಪೋರ್ಟ್‌ರ್ ಕವಿತೆಗೆ (1987) ಹಾಗೂ ನೋವು ನನ್ನ ಎದೆಯಲ್ಲಿ (1999) ಚುಟುಕಿಗೆ ಸಂಕ್ರಮಣ ಸಾಹಿತ್ಯ ಬಹುಮಾನ ಹಾಗೂ ಮನೆಯಲ್ಲಿ ಬೆಳದಿಂಗಳು ಕೃತಿಗೆ ಬೆಂಗಳೂರಿನ ಗೊರೂರು ಪ್ರತಿಷ್ಠಾನ ರನ್ನ ಸಾಹಿತ್ಯ ಪ್ರಶಸ್ತಿ ಲಭಿಸಿದೆ.