ಲೇಖಕ, ಜಾನಪದ ತಜ್ಞ ಕುರುವ ಬಸವರಾಜ್ ಅವರು ಮೂಲತಃ ಹಳೆಯ ಶಿವಮೊಗ್ಗ, ಈಗಿನ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಕುರುವ ಗ್ರಾಮದವರು. ಜಾನಪದ ಲೋಕದಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕರ್ನಾಟಕ ವಿ.ವಿ.ಯಿಂದ ಎಂ.ಎ(ಕನ್ನಡ) ಪದವಿ ಮತ್ತು ಬೆಂಗಳೂರು ವಿ.ವಿ.ಯಲ್ಲಿ ‘ಜನಪದ ಮಹಾಕಾವ್ಯಗಳ ನಿರ್ಮಾಣ ಪ್ರತಿಭೆಯ ನೆಲೆಗಳು’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ಜಾನಪದ ಅಕಾಡೆಮಿ ಫೆಲೋಷಿಪ್ ಗಾಗಿ ಕರ್ನಾಟಕ ಜನಪದ ಸಂಗೀತ ಅಧ್ಯಯನ ಮಾಡಿದ್ದಾರೆ.
ಪ್ರಕಟಿತ ಕೃತಿಗಳು: ಹುಲ್ಲೆಹಾಡು, ಕಾಡೊಡಲ ಹಾಡು, ಬೇಲಿ ಮ್ಯಾಗಳ ಹೂವು, ಮಣ್ಣ ಕುಸುಮದ ಹಕ್ಕಿ (ಕಾವ್ಯಸಂಗ್ರಹಗಳು)
ಸೆಳೆತ, ಕೋಳಿ ಅಂಕ- ಸಣ್ಣಕತೆ ಸಂಕಲನ ತಾಯಿ ಮಕ್ಕಳ ದನಿಯು ತಾಳ ಬಾರಿಸಿದ್ದಾಂಗ- ನಾಟಕ ಡೊಳ್ಳು ಮೇಳ -ಪರಿಚಯ ಕೃತಿ
ಸಂಪಾದಿತ ಕೃತಿಗಳು: ಗುಲಗಂಜಿ ಮಾದೇವಿ, ಜನಪದ ಒಗಟು ಕತೆಗಳು- ಜನಪದ ಕತೆಗಳ ಸಂಗ್ರಹಗಳು ಹೊನ್ನರಳಿ. ಮುಪ್ಪಿನ ಷಡಕ್ಷರಿ, ಹಾವು ತುಳಿದೇನ- ಇತರೆ
ಸಾಕ್ಷ್ಯ ಚಿತ್ರಗಳು: ಅವಲೋಕನ, ಕಿನ್ನರಿಜೋಗಿ, ಪಂಬದ, ಮಾಚಾರು ಗೋಪಾಲನಾಯಕ, ಬಿ.ಟಿ. ಲಲಿತಾ ನಾಯಕ ಮೊದಲಾದವುಗಳ ನಿರ್ದೇಶನ
ಪ್ರಶಸ್ತಿ: ಕರ್ನಾಟಕ ಸಾಹಿತ್ಯ ಅಕಾಡೆಮಿ- ಹುಲ್ಲೆಹಾಡು- ಕಾವ್ಯ ಕೃತಿಗೆ ಅತ್ಯುತ್ತಮ ಕೃತಿ ಪ್ರಶಸ್ತಿ-1994 ಕಾಡೊಡಲ ಹಾಡು- ಕಾವ್ಯ ಕೃತಿಗೆ ಗೋರೂರು ಪ್ರಶಸ್ತಿ, ನುಡಿ ಬೆಡಗು ಕೃತಿಗೆ ಅತ್ತಿಮಬ್ಬೆ ಪ್ರಶಸ್ತಿ- 1998, ಸಂಕ್ರಮಣ ಕಥಾ ಸ್ಪರ್ಧೆ ‘ಯಾತಕ್ಕೆ ಮಳೆ ಹೋದವೋ’ ಕತೆಗೆ ಮೊದಲ ಬಹುಮಾನ 1992, ಮಂಟೆಸ್ವಾಮಿ ಪ್ರಶಸ್ತಿ 2012, ರಂಗಾಯಣದ ರಂಗಗೌರವ 2012, ಕಿ.ರಂ. ಪುರಸ್ಕಾರ 2017 ಇವರ ಕೋಳಿ ಅಂಕ ಕೃತಿಗೆ 2021ನೇ ಸಾಲಿನ ಮಾಸ್ತಿ ಕಥಾಪುರಸ್ಕಾರ ಲಭಿಸಿದೆ