ರೇವಣಪ್ಪ ಬಿದರಗೇರಿ ಅವರು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ಮೂಲತಃ ಸೊರಬ ಜಿಲ್ಲೆಯ ಬಿದರಗೇರಿಯವರಾದ ಇವರು ಸಾಮಾಜಿಕ ಪರಿಶೋಧನಾ ಗ್ರಾಮ ಸಂಪನ್ಮೂಲ ವ್ಯಕ್ತಿಯಾಗಿ ಚಿರಪರಿಚಿತರು.
ಹೃದಯ ಕದ್ದ ಕಣ್ಣು (ಕಾದಂಬರಿ), ಜೀವನ ಜೋಪಾನ , ಸಾಹಿತ್ಯ ದೇಗುಲ, (ಕಥಾ ಸಂಕಲನ), ಜೋಗದ ಸಿರಿ , ಕಾವ್ಯ ಕಲರವ, ಕಪ್ಪು ಹಣ ಹೇಗಾಯಿತು ? ಏಕೆ ? , ಕೆ. ಎಸ್. ನ ನೆನಪು, (ಕವನ ಸಂಕಲನ) ಒಂದಾಗಿ ಬಾಳೋಣ , ಬೇಲಿಯ ಹೂಗಳು, (ಮಕ್ಕಳ ಕವನ ಸಂಕಲನ) ಉರಿಯುವ ಕೆಂಡದ ಮೇಲೆ (ಐತಿಹಾಸಿಕ ನಾಟಕ) ಸ್ವಾತಂತ್ಯ್ರದ ಆ ದಿನಗಳು, ಜಗಜ್ಯೋತಿ ಬಸವಣ್ಣ, ಪರಿವರ್ತನೆ ಮುಂತಾದ ನಾಟಕಗಳನ್ನು ರಚಿಸಿದ್ದಾರೆ.
ಇವರ ಅನೇಕ ಕಥೆಗಳು ಆಕಾಶವಾಣಿ ಮತ್ತು ತುಷಾರ, ಕಸ್ತೂರಿ, ಸಂಪದ ಸಾಲು, ಸನ್ಮಾರ್ಗ, ಮಿಂಚಿನ ಸಂಚಾರ, ಸಾಹಿತ್ಯ ಸುಗಂಧ, ಹೊಸ ದಿಗಂತ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ.
ಇವರ ಸಾಹಿತ್ಯ ಕೃಷಿಯನ್ನು ಗಮನಿಸಿ ಇವರಿಗೆ ಸಾಹಿತ್ಯ ಸಿರಿ – ರಾಜ್ಯ ಮಟ್ಟದ ಪ್ರಶಸ್ತಿ, ಬಸವ ಸಮಿತಿ ಪ್ರಶಸ್ತಿ, ಸಾಹಿತ್ಯ ರತ್ನ ಪ್ರಶಸ್ತಿ, ಶ್ರೀ ಗುರುರಾಜ ಯುವಗಾನ ಕಲಾಕೇಂದ್ರ ಪುರಸ್ಕಾರ ಹೀಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ.