ಲೇಖಕ ಸಿದ್ಧಲಿಂಗಪ್ಪ ಬೀಳಗಿ ಅವರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಯಡಹಳ್ಳಿ ಗ್ರಾಮದವರು. ಹುನಗುಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು. ವ್ಯಕ್ತಿತ್ವ ವಿಕಸನ ಮಾರ್ಗದರ್ಶಕರು. ಎಂ.ಎ. ಎಂ. ಈಡಿ ಪದವೀಧರರು. ಛಾಯಾಗ್ರಹಣ ಇವರ ಹವ್ಯಾಸ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಸುಮಾರು 500ಕ್ಕೂ ಅಧಿಕ ಚಿತ್ರಲೇಖನಗಳು ಪ್ರಕಟವಾಗಿವೆ. ಧಾರವಾಡ ಆಕಾಶವಾಣಿಯಿಂದ ಚಿಂತನಗಳು, ಭಾಷಣಗಳು, ಕಥೆ, ಸಂವಾದ, ಕವಿತೆಗಳು ಪ್ರಸಾರಗೊಂಡಿವೆ. ದೂರದರ್ಶನ ಚಂದನವಾಹಿನಿಯ 'ಬೆಳಗು' ನೇರಪ್ರಸಾರ ಮತ್ತು 'ವಚನಾಮೃತ' ಕಾರ್ಯಕ್ರಮ ಪ್ರಸಾರಗೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಶರಣ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯಮಟ್ಟದ ಕಮ್ಮಟ, ಕವಿಗೋಷ್ಠಿಗಳಲ್ಲಿ ಭಾಗಿ ಮತ್ತು ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕವಿತೆ ವಾಚಿಸಿದ್ದಾರೆ.
ಪ್ರಶಸ್ತಿ-ಗೌರವಗಳು: ಜಿಲ್ಲೆ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಸಂಕ್ರಮಣ ಸಾಹಿತ್ಯ ಪ್ರಶಸ್ತಿ, ನಿತ್ಯೋತ್ಸವ ರಸಪ್ರಶ್ನೆ ಪ್ರಶಸ್ತಿ ಲಭಿಸಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಯುವ ಕಾವ್ಯಾಭಿಯಾನದ ವಿಭಾಗ ಸಂಚಾಲಕರಾಗಿ, ಚಕೋರ ಕಾರ್ಯಕ್ರಮದ ಜಿಲ್ಲಾ ಸಂಯೋಜಕರಾಗಿದ್ದರು.