ಲೇಖಕ ಅಕ್ಬರ್ ಸಿ. ಕಾಲಿಮಿರ್ಚಿ ಮೂಲತಃ ಕೊಪ್ಪಳ ಜಿಲ್ಲೆಯ ಮಂಗಳೂರು ಗ್ರಾಮದವರು. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನ ಹುಟ್ಟೂರಿನಲ್ಲಿ, ನಂತರ ಬೆಂಗಳೂರಿನಲ್ಲಿ ಡಿಪ್ಲೋಮಾ, ರಾಮನಗರ ಜಿಲ್ಲೆಯಲ್ಲಿ ಔಷದ ವಿಜ್ಞಾನ ಪದವಿ ಪಡೆದರು. ಕಾವ್ಯ, ಮಕ್ಕಳ ಕವಿತೆ, ಕತೆ, ಜೀವನ ಚರಿತ್ರೆ, ಲೇಖನ, ಸಂಪಾದನೆ, ಕಥಾ ಸಂಕಲನ ಸೇರಿ 23 ಕೃತಿಗಳನ್ನು ರಚಿಸಿದ್ದಾರೆ.
ಕೃತಿಗಳು: ಆಶಯ, ಕಾಚಕ್ಕಿ, ಅಮಲ, ಕತ್ತಲೆಯ ಪ್ರೀತಿಗೆ, ಗಾಳಿ ಜೋಗುಳ, ಒಡಲ ಉರಿಯ ನೆನೆದು, ಬಂದೂಕಿಗೆ ಜೀವನವಿಲ್ಲ( ಕವನ ಸಂಕಲನಗಳು). ಬಾಪು ಪಾಪು, ರೈಲು ಗಾಡಿ, ಪುಟ್ಟಿಯ ಆಸೆ (ಮಕ್ಕಳ ಕವನ ಸಂಕಲನಗಳು), ಸಿದ್ಧಿಪುರುಷ ಯಲ್ಲಪ್ಪಜ್ಜನವರು ಮತ್ತು ಸಿದ್ಧರಾಯಜ್ಜನವರು, ನಮ್ಮ ಚಿಲಗೋಡರು, ಕಟಕೋಳ ಸಿದ್ಧರಾಯಜ್ಜನವರು, ತಾರಾನಗರ, ಹಿರೇಸ್ವಾಮಿ ಗುರುವರ ಬಡೇಸಾಬನ ಅವತಾರ (ಜೀವನ ಚರಿತ್ರೆಗಳು), ಕಾಲಿಮಿರ್ಚಿ ಪ್ರಶ್ನೆಗಳು, ಜೀವ ಮಿಡಿತದ ಧ್ಯಾನ, ಧೇವ್ರ ಮಗಳು ಮತ್ತು ಇತರ ಕಥೆಗಳು, ಹೆಣದ ದಿಬ್ಬ (ಕಥಾ ಸಂಕಲನಗಳು), ಹಲವು ಸಂಪಾದನೆ, ಅಭಿನಂದನಾ ಗ್ರಂಥಗಳನ್ನು ಪ್ರಕಟಣೆಗೆ ಶ್ರಮಿಸಿದ್ದಾರೆ. ಕನ್ನಡ ಹವ್ಯಾಸಿ ಸಂಘ ಸ್ಥಾಪಿಸಿ ಕಲೆ, ಸಾಹಿತ್ಯ, ಸಂಗೀತ, ಜನಪದ ಕಲೆ, ಸಾಧಕರಿಗೆ ಗೌರವ, ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ,. ಪಿ. ಲಂಕೇಶರ ʼಪ್ರಗತಿರಂಗʼ ಸಂಘಟನೆಯ ಜಿಲ್ಲಾ ಸಂಚಾಲಕರಾದ್ಗಿದರು. ಸಾಹಿತ್ಯ ಪ್ರಕಟನೆಗಾಗಿ ʼಕನ್ನಡ ಮೈತ್ರಿʼ ಪ್ರಕಾಶನʼ ಆರಂಭಿಸಿದ್ದಾರೆ.
ಪ್ರಶಸ್ತಿ ಪುರಸ್ಕಾರ: ನೆಹರು ಯುವ ಕೇಂದ್ರ ರಾಯಚೂರು ಅವರಿಂದ ʼ ಅತ್ಯುತ್ತಮ ಜಿಲ್ಲಾ ಯುವ ಪುರಸ್ಕಾರʼ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜಿಲ್ಲಾ ಗೌರವ, ಸಮುದಾಯ ಅಭಿವೃದ್ಧಿ ಸೇವೆಗಾಗಿ ರಾಜ್ಯ ಸರಕಾರದಿಂದ ʼರಾಜ್ಯ ಯುವ ಪುರಸ್ಕಾರʼ ಜೊತೆಗೆ 3 ವರ್ಷ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳದ ಜಿಲ್ಲಾ ಗೌರವ ಕಾರ್ಯದರ್ಶಿಯಾಗಿದ್ದರು.