ಲೇಖಕ ಪ್ರವೀಣ್ ಮಾಯಾಕಾರ ಮೂಲತಃ ಬೆಂಗಳೂರಿನವರು. ಈಗ ಸ್ವೀಡನ್ನಿನ ಸ್ಟಾಕ್ಹೋಲ್ಮ್ ನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ಇಂಜಿನೀಯರಿಂಗ್ ಪದವಿ ಪಡೆದು, ನಂತರ ಸ್ವೀಡನ್ನಿನಲ್ಲಿ ಇಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಾಂತ್ರಿಕ ಕ್ಷೇತ್ರದಲ್ಲಿ ಪರಿಣಿತರಾಗಿರುವ ಅವರು ಉದ್ಯಮಿ, ಸಂಗೀತ ಸಂಯೋಜಕ ಹಾಗೂ ಬರಹಗಾರರೂ ಹೌದು. ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ನಿರ್ಮಾಣ ಹಾಗೂ ಚಿಂತ್ರಸಂಭಾಷಣೆ ಬರೆಯುವುದು ಮತ್ತು ನಟನೆಯಲ್ಲಿ ಅತ್ಯಂತ ಉತ್ಸುಕತೆಯಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾರುವ ಮುನ್ನ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ.