ಹಾಡುಗಾರ, ಕವಿ ರಮೇಶ ಗಬ್ಬೂರ ಅವರು ಜನಿಸಿದ್ದು 1968 ಜೂನ್ 5ರಂದು. ಹುಟ್ಟೂರು ರಾಯಚೂರು ಜಿಲ್ಲೆಯ ಗಬ್ಬೂರ. ಪ್ರಸ್ತುತ ಗಂಗಾವತಿಯ ಸರ್ಕಾರಿ ಪಿ.ಯು ಕಾಲೇಜಿನಲ್ಲಿ ಗ್ರಂಥ ಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯ ಕೃಷಿ ಹಾಗೂ ಸಾಮಾಜಿಕ ಚಳವಳಿಯಲ್ಲಿಯೂ ಸಕ್ರಿಯರಾಗಿರುವ ಇವರು ಜಾಗೃತ ಗೀತೆ ರಚನೆ ಹಾಗೂ ಹಾಡುಗಾರಿಕೆಯಲ್ಲಿಯೂ ತೊಡಗಿಕೊಂಡಿದ್ದಾರೆ.
ಗೂನು ಬೆನ್ನಿನ ಗದ್ದೆ, ಅಲೆಮಾರಿಯ ಹಾಡು, ಗರೀಬ್ ಗಜ಼ಲ್, ಸಂಜೀವಪ್ಪ ಗಬ್ಬೂರ, ಒಲಿದಂತೆ ಹಾಡುವೆ, ಗಬ್ಬೂರ್ ಗಜ಼ಲ್ ಹಾಗೂ ಕಾಮ್ರೆಡ್ ಬಸವಣ್ಣ ಇವರ ಪ್ರಮುಖ ಕೃತಿಗಳು.