About the Author

ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು 08-09-1938ರದು ಜನಿಸಿದರು. ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ  ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ತೇಜಸ್ವಿ ಅವರು ಕಾರಂತರ ವೈಜ್ಞಾನಿಕ ದೃಷ್ಟಿಕೋನ ಮತ್ತು ಕುವೆಂಪು ಅವರ ಭಾವನಾಲೋಕಗಳಿಂದ ಪ್ರೇರಣೆ ಪಡೆದಿದ್ದರು. ಕಥೆ-ಕಾದಂಬರಿಗಳಿಂದ ಜನಪ್ರಿಯರಾಗಿರುವ ತೇಜಸ್ವಿ ಅವರು ಛಾಯಾಗ್ರಾಹಣ, ಸಹಜ ಕೃಷಿ, ಬೇಟೆ, ವೈಜ್ಞಾನಿಕ ಬರಹಗಳನ್ನು ಕೂಡ ಪ್ರಿಯವಾಗುವ ಹಾಗೆ ಬರೆಯಬಲ್ಲರು. 2001ರ ಪಂಪ ಪ್ರಶಸ್ತಿ ಪುರಸ್ಕ್ರತರು.  ಇವರು 05-04-2007ರಂದು ನಿಧನರಾದರು.

ಕೆ.ಪಿ. ಪೂರ್ಣಚಂದ್ರ ತೇಜಸ್ವಿ

(08 Sep 1938-05 Apr 2007)

Books by Author

Books about Author

Awards

ABOUT THE AUTHOR