ಕವಿತೆ, ಸಿನೆಮಾ, ಸಾಮಾಜಿಕ ಚಿಂತನೆ-ಹೋರಾಟ ಹೀಗೆ ಹಲವಾರು ರಂಗಗಳಲ್ಲಿ ತೊಡಗಿಕೊಂಡಿರುವ ಸಂವರ್ತ ಸಾಹಿಲ್ ಅವರದ್ದು ಬಹುಮುಖ ಪ್ರತಿಭೆ. ಕನ್ನಡಪ್ರಭದಲ್ಲಿ ಬರೆಯುತ್ತಿದ್ದ ‘ಬಾಳ್ಕಟ್ಟೆ’ ಅಂಕಣ ಬರಹ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತದ ವಿವಿಧ ಭಾಷೆಗಳಲ್ಲಿ ಪ್ರಕಟವಾದ ಕವಿತೆಗಳನ್ನು ‘ರೂಪರೂಪಗಳನು ದಾಟಿ’ ಎಂಬ ಶೀರ್ಷಿಕೆಯಡಿಯಲ್ಲಿ ಅನುವಾದಿಸಿದ್ದಾರೆ. ‘ಓದುವುದೆಂದರೆ ಸ್ಪರ್ಶಿಸಿದಂತೆ’ ಅವರ ಮತ್ತೊಂದು ಅನುವಾದಿತ ಕೃತಿ ಇತ್ತಿಚೆಗೆ ಪ್ರಕಟವಾಗಿದೆ.