ಕವಿ ಬಿ.ಎಂ.ರಾವ್ ಆನೂರು ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಆನೂರು ಗ್ರಾಮದವರು. ಹುಟ್ಟೂರಿನಲ್ಲೇ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿ, ಕಲಬುರಗಿಯಲ್ಲಿ ಪಿಯುಸಿ, ಧಾರವಾಡದಲ್ಲಿ ಪದವಿ ಶಿಕ್ಷಣ ನಂತರ ಬೆಂಗಳೂರು ವಿ.ವಿ.ಯಿಂದ ಎಂ.ಎ ಪದವೀಧರರು. ಮೈಸೂರು ವಿ.ವಿ.ಯಿಂದ ಎಂಫಿಲ್ ಪದವೀಧರರು. ಸದ್ಯ, ಅಫಜಲಪುರದ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರು.ಪದವೀಧರ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ಅಹಿಂದ ನೌಕರರ ಸಂಘದ ಅಧ್ಯಕ್ಷರಾಗಿ, ತಾಲೂಕು ಸಾಹಿತ್ಯ ವೇದಿಕೆಯ ಕಾರ್ಯದರ್ಶಿಯಾಗಿ, ದೇವರಾಜುಅರಸು ಹಿತರಕ್ಷಣಾ ವೇದಿಕೆಯ ಸಂಚಾಲಕರಾಗಿದ್ದರು.
ಕೃತಿಗಳು: ಕಣ್ಣಂಚಿನ ಹನಿಗಳು, ತೀರದ ತೆರೆ, ಶಿಕ್ಷಕರ ಸಾಹಿತ್ಯ, ಭಾವನೆಯ ಗೊಂಚಲು, ಮನದೊಳಗಿನ ಮೌನ, ಅಲೆಗಳು, ಭೀಮಾತೀರದಲ್ಲಿ ಕಾವ್ಯದ ಬುಗ್ಗೆ, ನಾ ಕವಿತೆ ಬರೆಯಲೇ ಇಲ್ಲ (ಕವನ ಸಂಕಲನ),
ಪ್ರಶಸ್ತಿ-ಪುರಸ್ಕಾರಗಳು: ಶಿಕ್ಷಕ ವೃತ್ತಿಗಿಂತ ಮುಂಚೆ ಅವರು ಗ್ರಾ.ಪಂ. ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಆಗಿನ ರಾಷ್ಟ್ರಪತಿ ಆರ್. ವೆಂಟರಾಮನ್ ಅವರಿಂದ ಗೌರವ ಸನ್ಮಾನ ಪಡೆದಿದ್ದರು. ತಾಲೂಕು ಅತ್ಯುತ್ತಮ ಪ್ರಶಸ್ತಿ, ಅರಸು ಪ್ರಶಸ್ತಿ, ರಾಷ್ಟ್ರಮಟ್ಟದ ಜ್ಞಾನಸಿಂದೂ ಪ್ರಶಸ್ತಿ ಲಭಿಸಿದೆ. ,