ಸಚಿನ್ ಒಡೆಯರ್ ಅವರು ಮೂಲತಃ ವಿಜಯಪುರ ಜಿಲ್ಲೆ ಹಾಗೂ ತಾಲೂಕಿನ ಕಂಬಾಗಿ (ಜನನ: 10-07-1992) ಗ್ರಾಮದವರು. ಬಿ.ಎಸ್.ಸಿ. ಪದವೀಧರರು. ಮುಂಡರಗಿಯ ವಿಜಯನಗರ ಸಕ್ಕರೆ ಕಾರ್ಖಾನೆಯಲ್ಲಿ ಪ್ರಯೋಗಾಲಯದ ತಾಂತ್ರಿಕ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಲೆ-ರಂಗಭೂಮಿಯಲ್ಲಿ ಆಸಕ್ತಿ ಇದೆ. ಭಾವ ಭಂಡಾರ-ಇವರ ಮೊದಲ ಕವನ ಸಂಕಲನ.