ಕೀರ್ತಿ ಕಿರಣ್ ಕುಮಾರ್ ಸಕಲೇಶಪುರದವರು. ಇವರು 1984 ಫೆಬ್ರವರಿ 13 ರ ರಲ್ಲಿ ಕೊಡಗು ಜಿಲ್ಲೆ , ಸೋಮವಾರ ಪೇಟೆ ತಾಲ್ಲೂಕಿನ, ಹಾರಳ್ಳಿ ಗ್ರಾಮದಲ್ಲಿ ಜನಿಸಿದರು. ತಂದೆ ಎನ್. ಎನ್. ಧರ್ಮಪ್ಪ ಮತ್ತು ತಾಯಿ ಸುಶೀಲ. ಬಿ. ಎಸ್ಸಿ. ಬಿ. ಎಡ್. ತರಬೇತಿ ಯನ್ನು ಜೆ. ಎಸ್ . ಎಸ್. ಶಿಕ್ಷಣ ಸಂಸ್ಥೆ ಯಲ್ಲಿ ಪಡೆದು ಕೆಲವು ವರ್ಷ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಕಳೆದ ನಾಲ್ಕು ವರ್ಷ ಗಳಿಂದ ನಾಡಿನ ಪತ್ರಿಕೆ ಗಳಿಗೆ, ಕಾಯಂ ಲೇಖಕಿಯಾಗಿ, ಸಂದರ್ಶಕಿಯಾಗಿ, ವರದಿಗಾರ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ ಲಲಿತ ಪ್ರಭಂದ, ಕವಿತೆ, ಸಣ್ಣ ಕಥೆ, ಬರೆಯುವುದು ಇವರ ಪ್ರಮುಖ ಹವ್ಯಾಸಗಳಾಗಿವೆ,. ನಿಯತಕಾಲಿಕೆಗಳಲ್ಲಿ ಇವರ ಕಥೆ ಮತ್ತು ಕವಿತೆಗಳು ನಿರಂತವಾಗಿ ಪ್ರಕಟಣೆಗೊಂಡು ಜನಮನ್ನಣೆ ಗಳಿಸಿವೆ. ಸಾಕಷ್ಟು ಸಾಹಿತ್ಯಕ ಕಾರ್ಯಕ್ರಮ ಗಳಲ್ಲಿ ನಿರೂಪಣೆ, ನೃತ್ಯ, ಭಾವಾಗೀತೆ, ಜಾನಪದ ಗೀತೆ ಹಾಡುವುದರ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಿದ್ದಾರೆ.