ಕವಯತ್ರಿ ನಾಗವೇಣಿ ಹೆಗಡೆ ಅವರು ಮೂಲತಃ ಶಿರಸಿಯ ಹೆಗ್ಗರ್ಸಿಮನೆ ಗ್ರಾಮದವರು. ಜನಿಸಿದ್ದು ಶಿರಸಿಯ ಬೊಮ್ಮನಹಳ್ಳಿಯಲ್ಲಿ. ತಂದೆ ಕಮಲಾಕರ, ತಾಯಿ ಸುನಂದಾ. ಗೃಹಿಣಿಯ ಹೊಣೆಗಾರಿಕೆ ಮಧ್ಯೆಯೂ ಫ್ಯಾಷನ್ ಡಿಸೈನ್ ಸೇರಿದಂತೆ ಸಾಹಿತ್ಯದಲ್ಲೂ ವಿಶೇಷ ಆಸಕ್ತರು. ಮೊದಲಿನಿಂದಲೂ ಕರಕೌಶಲಗಳಲ್ಲಿಆಸಕ್ತರು. ಮಾತ್ರವಲ್ಲ; ಭರ್ಚಿಎಸೆತ, ರೀಲೆ, ವಾಲಿಬಾಲ್ , ಕಬ್ಬಡ್ಡಿಗಳಲ್ಲೂ ಬಹುಮಾನ ವಿಜೇತರು. ನಾಡಿನ ಹಲವಾರು ಪತ್ರಿಕೆಗಳಲ್ಲಿಇವರ ಕಥೆ-ಕವನಗಳು ಪ್ರಕಟಗೊಳ್ಳುತ್ತಿವೆ. `ಕಣ್ಣು' ಪತ್ರಿಕೆಯ ಶಿರಸಿ ಉಪಸಂಪಾದಕಿ ಹಾಗೂ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಶಸ್ತಿ-ಪುರಸ್ಕಾರಗಳು: ಚೇತನ ಪ್ರಕಾಶನದಿಂದ 2019 ರ ಸಾಲಿನಲ್ಲಿ ಕರುನಾಡ ಸನ್ಮಾನ್ ಹಾಗೂ ಕರುನಾಡ ಚೇತನ ಪ್ರಶಸ್ತಿ, 2020 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಂದ ಕನ್ನಡ ಸೇವಾ ರತ್ನ ಪ್ರಶಸ್ತಿಗಳು ಲಭಿಸಿವೆ.