‘ಮೂಡಲಕ ಕೆಂಪ ಮೂಡ್ಯಾವ’ ಲೇಖಕ ಬಸವರಾಜ ಸಬರದ ಅವರ ಕವನ ಸಂಕಲನ. ಈ ಕೃತಿಗೆ ಡಾ. ಚೆನ್ನಣ್ಣ ವಾಲೀಕಾರ ಹಾಗೂ ಬಸವರಾಜ ಕಟ್ಟೀಮನಿ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಇವತ್ತಿನ ಬಂಡಾಯ ಕವಿಗಳಲ್ಲಿ ಡಾ. ಬಸವರಾಜ ಸಬರದರ ಮೂಡಲಕ ಕೆಂಪ ಮೂಡ್ಯಾವ ಒಂದು ಗಮನಾರ್ಹವಾದ ಸಂಕಲನ. ಅನ್ಯಾಯ, ಅತ್ಯಾಚಾರ, ಶೋಷಣೆ, ದಬ್ಬಾಳಿಕೆ, ಅಸಮಾನತೆ ಎಲ್ಲಿಯೇ ಕಾಣಲಿ ಉರಿದು ಬೀಳುವ ಡಾ. ಸಬರದವರು ರೊಚ್ಚು, ರೋಷ ಈ ಸಂಕಲನದಲ್ಲಿ ಕ್ರಮೇಣ ಕಲಾತ್ಮಕವಾಗುವುದನ್ನು ಕಾಣುತ್ತೇವೆ. ಮಾನವನ ಬದುಕನ್ನು ರೂಪಿಸುವ ಪ್ರಕೃತಿಯು ಕ್ರಾಂತಿಗೆ, ಹೋರಾಟಕ್ಕೆ ವ್ಯವಸ್ಥೆಯ ವಿರುದ್ಧ ಸಜ್ಜಾಗಿ ನಿಂತಿರುವುದನ್ನು ಈ ಸಂಕಲನ ತಳಿಸಿತ್ತದೆ ಎಂದಿದ್ದಾರೆ ಡಾ. ಚೆನ್ನಣ್ಣ ವಾಲೀಕಾರ. ಕಾವ್ಯಜನಪರವಾಗಬೇಕೆಂಬ ಈ ದಿನಗಳಲ್ಲಿ ಸಬರದವರ ಈ ಸಂಕಲನ ಹಿಂದಿನವರು ತಿಳಿದುಕೊಂಡಂತೆ ಮನ ಅರಳಿಸುವುದಕ್ಕಾಗಿರದೆ, ಕೆರಳಿಸುವುದಕ್ಕಾಗಿರುವುದನ್ನು ಇಲ್ಲಿಯ ಕವಿತೆಗಳು ಝಳಪಿಸುತ್ತವೆ. ಜನ ಮಧ್ಯದಲ್ಲಿ ಈ ಕವಿತೆಗಳನ್ನು ಗಟ್ಟಿಯಾಗಿ ಹೇಳುತ್ತಾ ಹೋದಂತೆ ಬದುಕಿನಲ್ಲಿ ಕೆಂಪು ಸ್ಪೋಟಿಸುತ್ತದೆ. ಕಲ್ಯಾಣ ನಾಡಿನ ಬೀದರನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿರುವ ಗೆಳೆಯ ಸಬರದವರ ಈ ಕಾವ್ಯ, ಇಲ್ಲಿಯ ಜನಾಂಗದ ನೋವು ನಿರಾಶೆಗಳಿಂದ ಕೂಡಿದ್ದು ಮುಂದಿನ ಹೋರಾಟಕ್ಕೆ ಪ್ರಕೃತಿಯ ಜೊತೆ ನಿಂತಿದ್ದನ್ನು ದಾಖಲಿಸುತ್ತದೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.
ಬಸವರಾಜ ಸಬರದ ಅವರು ಮೂಲತಃ ಕೊಪ್ಪಳ ಜಿಲ್ಲೆ ಯಲಬುರ್ಗ ತಾಲ್ಲೂಕಿನ ಕುಕನೂರಿನವರು. ಹುಟ್ಟಿದ್ದು 1954 ಜೂನ್ 20ರಂದು. ತಾಯಿ ಬಸಮ್ಮ, ತಂದೆ ಬಸಪ್ಪ ಸಬರದ. ಹುಟ್ಟೂರು ಕುಕನೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಪದವಿ ಪಡೆದರು. ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದ ಇವರು ಹಲವಾರು ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಶೈಕ್ಷಣಿಕವಾಗಿ ಮಾತ್ರವಲ್ಲದೇ ದೇವದಾಸಿ ವಿಮೋಚನಾ ಹೋರಾಟ, ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹ, ಅಸ್ಪೃಶ್ಯತಾ ನಿವಾರಣೆ, ದಲಿತ-ಬಂಡಾಯ ಚಳವಳಿ ಮುಂತಾದ ಸಾಮಾಜಿಕ ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ನನ್ನವರ ಹಾಡು, ಹೋರಾಟ, ...
READ MORE