ದು. ಸರಸ್ವತಿ ಅವರ ಕವನ ಸಂಕಲನ. ಬಯಲುಗಾಳಿಯಲ್ಲಿ ಇದ್ದಕ್ಕಿದ್ದಂತೆ ಎದುರಾಗುವ ಕೊಳಲ ಒದ್ದೆ ದನಿಯಂತಹ ಸರಸ್ವತಿಯವರ ಎರಡನೇ ಸಂಕಲನವಿದು. ಈಗಾಗಲೇ ಹೆಣೆದರೆ ಜೇಡನಂತೆ ಎಂಬ ಕವನ ಸಂಕಲನ, ಹೋರಾಟದ ಬದುಕಿನಲ್ಲಿ ಸ್ವತಃ ತಾನೇ ಶೋಷಣೆಗೆ ಈಡಾಗಿ ಆ ನೋವಿನ ನೆನಪುಗಳನ್ನು ಈಗೇನ್ ಮಾಡೀರಿ ಎಂಬ ಎನುಭವ ಕಥನವನ್ನು ಸರಸ್ವತಿ ರಚಿಸಿದ್ದಾರೆ. ಜೇಡರ ಹುಳದ ಖಚಿತವಾದ, ಆದರೆ ನಾಜೂಕಾದ ಹೆಣಿಗೆಯಂತ ಹಲವು ಕವಿತೆಗಳು ಈ ಸಂಕಲನದಲ್ಲಿವೆ.
ಕೆಲವು ಕವಿತೆಗಳಂತೂ ಅವುಗಳು ಒಳಗೊಳ್ಳುವ ಲೆಕ್ಕಾಚಾರದ ಚಿತ್ರಣದಿಂದ ವಿಸ್ಮಯ ಹುಟ್ಟಿಸುತ್ತವೆ. ಬದುಕಿಗೆ ಚಾಲನೆ ನೀಡಿದ ಧರಣಿ, ಮೈಲಿಗಲ್ಲುಗಳ ಎಣಿಸುವ ಮೊಲ, ಸವೆಸಿದ ದಾರಿ ಅರಿಯುವ ಆಮೆ ಇವುಗಳನ್ನು ವರ್ಣಿಸುತ್ತಾ ಅಡಗಿಕೊಳ್ಳಲು ಚಿಪ್ಪಿಲ್ಲದ, ವೇಗದ ಹೊಡೆತಕ್ಕೆ ಸಿಕ್ಕು ಮುಕ್ಕಾದ ಹೆಂಗೂಸು ತಾನು ಎಂಬ ನಿರ್ಣಯ ಆತ್ಮ ನಿರೀಕ್ಷಣೆಯ ಫಲವಾಗಿದೆ. ಸಿದ್ಧಗತಿಯಲ್ಲಿ ಈಗಾಗಲೇ ಕ್ರಮಿಸಲಾರಂಭಿಸಿದ ಜೀವವೊಂದು ಅದೇ ಹಾದಿಯಲ್ಲಿ ಜೇಡರ ಬಲೆಯಲ್ಲಿ ಸಿಕ್ಕಿ ನರಳಿದರೂ ಅದಕ್ಕೆ ಮೊದಲು ಕೋಶವನ್ನು ಒಡೆದಲ್ಲದೆ ಇನ್ನೊಂದು ಕೋಶಕ್ಕೆ ಅಡಿಯಿಡಲು ಅನುಮತಿ ಇಲ್ಲ. ಈ ಅವಸ್ಥಾಂತರವಿಲ್ಲದೆ ಬದುಕಿನಲ್ಲಿ ಬದಲಾವಣೆಯಿಲ್ಲ ಎಂಬ ಅರಿವಿನಿಂದಲೇ ಇಲ್ಲಿನ ಕಾವ್ಯಕರ್ಮ ನಡೆದಿದೆ. ತಮ್ಮಿಂದ ದೂರವೇ ತಡೆದಿಡಿಯಲ್ಪಟ್ಟ ಸೂರ್ಯನ ಕಿರಣಗಳನ್ನು ಕಾಣುವ ಅಧಮ್ಯ ಬಯಕೆ ಈ ಪದ್ಯಗಳಲ್ಲಿವೆ.
ದು.ಸರಸ್ವತಿ- ಹುಟ್ಟಿದ್ದು 20 ಏಪ್ರಿಲ್ , 1963, ಬೆಂಗಳೂರಿನಲ್ಲಿ. ವಿದ್ಯಾಭ್ಯಾಸವೂ ಬೆಂಗಳೂರಿನಲ್ಲಿಯೇ. ರಂಗಭೂಮಿ, ಚಿತ್ರಕಲೆ, ಮಹಿಳಾ ಮತ್ತು ದಲಿತ ಚಳುವಳಿ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ಸರಸ್ವತಿ, ಹೆಣೆದರೆ ಜೇಡನಂತೆ(ಕಡೆಂಗೋಡ್ಲು ಕಾವ್ಯ ಪ್ರಶಸ್ತಿ-1997), ಈಗೇನ್ ಮಾಡೀರಿ(ಅನುಭವ ಕಥನ-2000) ಕೃತಿಗಳನ್ನು ಪ್ರಕಟಿಸಿದ್ದಾರೆ. ...
READ MORE