ಒಂದು ಜಿಲೇಬಿ

Author : ಜಯಂತ ಕಾಯ್ಕಿಣಿ

Pages 68

₹ 50.00




Year of Publication: 2008
Published by: ಅಂಕಿತ ಪುಸ್ತಕ
Address: 53, ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 560004

Synopsys

‘ಒಂದು ಜಿಲೇಬಿ’ ಜಯಂತ ಕಾಯ್ಕಿಣಿ ಅವರ ಕವನ ಸಂಕಲನ. ಇಲ್ಲಿ ಅಂಚು, ಅರ್ಧಚಂದ್ರ, ಅವರ ಕಂಗಳೆ ಹಾಗೆ, ರೂಪಾಂತರ, ಅಡಿ ಟಿಪ್ಪಣಿ, ಹೆಸರು, ರಾತ್ರಿಶಾಲೆ, ಅಕ್ಕ, ಘಾಟ್ ಸೆಕ್ಕನ್, ಮೂರನೆ ಅಂಕ, ಹೆದ್ದಾರಿ ಚಾಲಕನ ಗುನುಗು, ವೇಷ, ಹೂಭಾಸ, ಕಾಣದ ಹನಿ, ಅಡ್ಡಮರ, ದೇಹಾಂತರ, ನಿರ್ಮಲ ನೀರವ, ವಾಕ್ ಮನ್, ಪಟ, ತಟ್ಟಿರಾಯನ ಜತೆಗೆ, ಒಂದು ಸರೀ ಕಡ್ಡಿಗಾಗಿ, ಕಣ್ಣಿನಲ್ಲಿ ಬಿದ್ದ ಜಗವೆ, ನಸುಕಿನ ಮುಖ, ಪೋರ, ಅವನೇ ಇಲ್ಲ ಅಂದರೆ, ಬೀಜಿಂಗ್ ಪೋರಿ, ತೀರದ ಭಾರ್ಗವ, ಧಾರವಾಡದಲ್ಲಿ ಅಡ್ಡ ಮಳೆ, ಸಣ್ಣ ಸೊಲ್ಲು, ಒಂದು ಜಿಲೇಬಿ ಸೇರಿದಂತೆ ಹಲವು ಕವಿತೆಗಳು ಸಂಕಲನಗೊಂಡಿವೆ.

About the Author

ಜಯಂತ ಕಾಯ್ಕಿಣಿ
(24 January 1955)

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಜನಿಸಿದ ಜಯಂತ ಅವರ ತಂದೆ ಗೌರೀಶ ಕಾಯ್ಕಿಣಿ ಹೆಸರಾಂತ ವಿಚಾರವಾದಿ ಲೇಖಕ.  ಆಧುನಿಕ ಬದುಕಿನ ಆತಂಕಗಳನ್ನು ಕತೆಯಾಗಿಸುವ ಜಯಂತ ಕಾಯ್ಕಿಣಿ ಅವರು ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರು.  ’ಕತೆಗಾರ’ ಎಂಬ ವಿಶೇಷಣ ಇದೆಯಾದರೂ ಅವರೊಬ್ಬ ಪ್ರಮುಖ ಕವಿ ಕೂಡ ಹೌದು. ಪ್ರಬಂಧ, ಅಂಕಣ ಬರಹ, ಚಲನಚಿತ್ರ ಸಂಭಾಷಣೆ ಮತ್ತು ಗೀತರಚನೆ ಹೀಗೆ ಹಲವು ಪ್ರಕಾರಗಳಲ್ಲಿ ಹೆಜ್ಜೆಗುರುತು ಮೂಡಿಸಿದ್ದಾರೆ. ’ಭಾವನಾ’ ಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದ ಜಯಂತ ಅವರು ಈಟಿವಿ ವಾಹಿನಿಗಾಗಿ ’ನಮಸ್ಕಾರ’, ಬೇಂದ್ರೆ, ಕುವೆಂಪು, ಕಾರಂತ ನಮನ ಸರಣಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ರಂಗದಿಂದೊಂದಿಷ್ಟು ದೂರ, ಕೋಟಿತೀರ್ಥ, ಶ್ರಾವಣ ಮಧ್ಯಾಹ್ನ, ...

READ MORE

Related Books