ಕೊರಕುಂಟೆ ತಿಪ್ಪೇಸ್ವಾಮಿಯವರ ನಾಲ್ಕನೆಯ ಕೃತಿಯಾದ 'ಭಾವರೂಪ' ಹನಿಗವನಗಳ ಸಂಕಲನ. ಕವಿ ಹೇಳಬೇಕೆಂದುಕೊಂಡಿರುವ ವಿಚಾರವನ್ನು ತುಂಬಾ ಪ್ರಖರವಾಗಿ, ಪರಿಣಾಮಕಾರಿಯಾಗಿ ಹೇಳಲು ಈ ಹನಿಗವನಗಳೇ ಸೂಕ್ತ ಎಂದು ಹೇಳಬಹುದು. ಅನುಭವದ ಮೂಸೆಯಲ್ಲಿ ಅರಳಿದ ಹನಿಗವಿತೆಗಳಾಗಿರುವುದರಿಂದ ಅವುಗಳ ಭಾವ ತೀವ್ರತೆ ಓದುಗನದೂ ಆಗುವಲ್ಲಿ ಸಫಲತೆ ಪಡೆದಿವೆ. ಸಾಮಾನ್ಯವಾಗಿ ಹನಿಗವಿತೆಗಳೆಂದರೆ, ಪ್ರಾಸ ಪ್ರಿಯತೆಯಿಂದಲೋ ಅಥವಾ ಮನರಂಜನಾತ್ಮಕವಾಗಿ ಓದುಗರನ್ನು ಸೆಳೆದು ಆ ಕ್ಷಣಕ್ಕೆ ಖುಷಿ ನೀಡಿ ನಂತರ ಮನಸ್ಸಲ್ಲಿ ಉಳಿಯದೆ ಉಲಿಗೆ ಸೇರುವುದಿಲ್ಲ, ಒಂದು ಹನಿಗಸಿತೆಯನ್ನು ಓದಿದ ಮೇಲೆ ಅದು ಮನದಲ್ಲಿ ಅಚ್ಚಳಿಯದೆ ಉಳಿದು ಬಿಡುವ, ಚಿಂತನೆಗೆ ಹಚ್ಚುವ ತೀವ್ರತೆ ಹನಿಗವಿತೆಗಳಿಗಿವೆ.
ಕೊರ್‍ಲಕುಂಟೆ ತಿಪ್ಪೇಸ್ವಾಮಿ ಅವರು ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕಿನ ಗಡಿಗ್ರಾಮ ಕೊಡ್ಲಕುಂಟೆಯಲ್ಲಿ ನರಸಮ್ಮ ಮತ್ತು ಜೂಗಲಪ್ಪ ಎಂಬ ದಂಪತಿಗಳ ಮಗನಾಗಿ 09-09-1975ರಲ್ಲಿ ಜನಿಸಿದರು. ಎಂ.ಎ ಪದವೀಧರರಾದರೂ ವೃತ್ತಿಯಲ್ಲಿ ಪತ್ರಕರ್ತರು, ಪ್ರವೃತ್ತಿಯಲ್ಲಿ ಕವಿಗಳು ಜತೆಗೆ ಕನ್ನಡಪರ ಸಂಘಟಕರು. ಗಡಿಭಾಗದಲ್ಲಿ ಕನ್ನಡ ರಕ್ಷಣಾ ಮತ್ತು ಸಾಂಸ್ಕೃತಿಕ ವೇದಿಕೆ(ರಿ) ಸಂಘಟನೆಯೊಂದಿಗೆ ಕನ್ನಡಪರ ಸೇವೆಗಾಗಿ “ಕನ್ನಡಮನೆ” ಕಟ್ಟಿದ ನಿಷ್ಠಾವಂತ ಸೇವಕರಾಗಿ ನಾಡಿನ ನೆಲ, ಜಲ, ಭಾಷೆ ಅಸ್ಮಿತೆಯ ಉಳುವಿಗಾಗಿ ಶ್ರಮಿಸುತ್ತಿದ್ದಾರೆ. ಉಡುಪಿ ನಗರದಲ್ಲಿ 2007ರಲ್ಲಿ ನಡೆದ 74ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿದ ಇವರ ಚೊಚ್ಚಲ ...
READ MORE