ಲೇಖಕ ವಾಸುದೇವ ನಾಡಿಗ್ ಅವರ ಕೃತಿ ʻನಿನ್ನ ಧ್ಯಾನದ ಹಣತೆʼ. ಪುಸ್ತಕವು 2014ರ ʻಕಡೆಂಗೋಡ್ಲು ಕಾವ್ಯ ಪುರಸ್ಕಾರʼ ಪಡೆದ ಕೃತಿಯಾಗಿದೆ. ಪುಸ್ತಕದ ಬೆನ್ನುಡಿಯಲ್ಲಿ ಲೇಖಕ ಕಲ್ಲೇಶ್ ಕುಂಬಾರ್ ಅವರು, “ಇಲ್ಲಿ, ಕವಿ ನಾಡಿಗರು 'ನಿನ್ನ ಧ್ಯಾನದ ಹಣತೆ' ಸಂಕಲನದ ಕವಿತೆಗಳನ್ನು ಕೃಷ್ಣ ರಾಧೆಯರ ನಡುವಿನ ತೀರ ಖಾಸಗಿಯಾದ ಮತ್ತು ಅಷ್ಟೇ ಆಪ್ತವಾದ ಸಂವಾದರೂಪಿ ಮಾತುಗಳು ಎಂದು ಹೇಳಿಕೊಂಡಿರುವುದಾದರೂ ಸಹ ದ್ವಾಪರಯುಗದ ಈ ಕೃಷ್ಣ - ರಾಧೆಯರಿಬ್ಬರನ್ನು ದೈವಿಕತೆಯ ಪರಿಧಿಯಿಂದ ಹೊರಗಿಟ್ಟು, ಅವರಿಬ್ಬರ ಆಪ್ತ ಮಾತುಕತೆಗಳಲ್ಲೇ ಒಮ್ಮೆ ಈ ಕ್ಷಣದಲ್ಲಿ ನಾವು ಉಸುರಾಡುತ್ತಿರುವ ಬದುಕಿನಲ್ಲಿ ಸಬಲರ ಒಡೆತನದಲ್ಲಿರುವ ಅತಿ ಘೋರ ವ್ಯವಸ್ಥೆಯ ದೆಸೆಯಿಂದಾಗಿ ಅನುಭವಿಸುತ್ತಿರುವ ನೋವು, ಮತ್ತೊಮ್ಮೆ ಈ ಪರಿ ಅವಮಾನಗಳ ಹುತ್ತದಲ್ಲಿ ಕುದಿವ ನಮ್ಮೆಲ್ಲರ ಬದುಕೆಂಬ ಕಡಲಿನ ಆಳಕ್ಕಿಳಿದು ಪ್ರೀತಿ-ಪ್ರೇಮದಂಥ ಮಧುರ ಭಾವನೆಗಳ ಜೊತೆಗೆ ಅನುಭಾವದ ಅನುಭವವೊಂದರ ಹುಡುಕಾಟ ನಡೆಸುತ್ತಾರೆ. ಒಂದೊಮ್ಮೆ ಓದುಗ, “ನಿನ್ನ ಧ್ಯಾನದ ಹಣತೆ' ಸಂಕಲನದ ಸಂವಾದ ರೂಪಿ ಕವಿತೆಗಳ ಆಳಕ್ಕಿಳಿಯುತ್ತ ಹೋದಂತೆ... ಇವು ಕೇವಲ ಕೃಷ್ಣ-ರಾಧೆಯರಿಬ್ಬರ ತೀರಾ ಖಾಸಗಿಯಾದ ಮಾತುಗಳೆಂದೆನಿಸುವುದಿಲ್ಲ. ಬದಲಿಗೆ, ಕವಿ ವಾಸುದೇವ ನಾಡಿಗರು ತಮ್ಮ ಸುತ್ತಲಿನ ಬದುಕನ್ನು ನೋಡುವ ಪರಿಯಿಂದಾಗಿ ವಿಭಿನ್ನ ರೀತಿಯ ತಾತ್ವಿಕತೆಯನ್ನು ಬೆಳೆಸಿಕೊಂಡಿರುವುದರಿಂದಾಗಿ ಆ ಮೂಲಕ ಜೀವನವನ್ನು ಗ್ರಹಿಸುತ್ತಲೇ ಓದುಗನ ಮುಂದೆ ಈ ಹೊತ್ತಿನ ಅನೇಕ ಸಂಗತಿಗಳನ್ನು ಒಂದಾನೊಂದು ಕಾಲದ ಸಂಗತಿಗಳೊಂದಿಗೆ ಸಮೀಕರಿಸಿ ಹೇಳುತ್ತಲೇ ಸಂವಾದಕ್ಕಿಳಿದು ಬಿಡುತ್ತಾರೆ ಎಂದೆನಿಸಿಬಿಡುತ್ತದೆ. ಹೀಗಾಗಿಯೇ ಇಲ್ಲಿನ ಸಂವಾದರೂಪಿ ಕವಿತೆಗಳು ಎಣ್ಣೆ ತೀರದ ಹಣತೆಯಂತೆ ಸದಾ ಓದುಗನ ಎದೆಯಲ್ಲಿ ಬೆಳಗುತ್ತಲೇ ಇರುತ್ತವೆ” ಎಂದು ಹೇಳಿದ್ದಾರೆ.
ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. 20 ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ...
READ MORE