ಗೋಪಾಲ ಭಟ್.ಸಿ.ಯಚ್ ಅವರ ಮುಕ್ತಕಗಳ ಸಂಗ್ರಹ ಗೋಪಾಲಬಾಲನ ಮುಕ್ತಕ ಮಾಲೆ. ಪಾರಮಾರ್ಥಿಕ ಭಾಗ 1 ರಲ್ಲಿ 1000 ಭಗವದ್ಗೀತೆ ಸಾರ ಮುಕ್ತಕಗಳು ಮತ್ತು ಪಾರಮಾರ್ಥಿಕ ಭಾಗ 2 ರಲ್ಲಿ500 ಮುಕ್ತಕಗಳಿವೆ. ಈ ಕೃತಿಯಲ್ಲಿ ಕವಯಿತ್ರಿ ಆಶಾಮಯ್ಯ ಅವರು ಹಿನ್ನುಡಿಗಳನ್ನು ಬರೆದಿದ್ದಾರೆ. ಅವರು ಹೇಳುವಂತೆ, ಪಾರಮಾರ್ಥಿಕ ಹಾಗೂ ಪ್ರಾಪಂಚಿಕ ಮುಕ್ತಕಗಳ ಸರಮಾಲೆ ಅರಿವಿನ ಬೆಳಕನ್ನು ಬಿತ್ತಿ, ಕವಿದ ತಮವನ್ನು ಹೋಗಲಾಡಿಸಿ, ಇಹದ ಪರಿವೆಯ ಜೊತೆಗೆ ನಶ್ವರದ ಈ ಬದುಕಿನ ಬಗ್ಗೆಯೂ ಕನ್ನಡಿ ಹಿಡಿದು, ನಮ್ಮದೇನಿಲ್ಲ. ಎಲ್ಲವೂ ಆ ದೇವರ ಮಹಿಮೆ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸುವಲ್ಲಿ ಸಫಲವಾಗಿದೆ ಎಂಬುದಾಗಿ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪಡ್ನೂರು ಗ್ರಾಮದ ಚಣಿಲ ಎಂಬಲ್ಲಿ ದಿ! ಕಜೆ ತಿಮ್ಮಣ್ಣ ಭಟ್ಟ- ದಿ! ಸರಸ್ವತಿ ಅಮ್ಮನವರ ಕೊನೆಯ ಪುತ್ರನಾಗಿ 11--4--1957 ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸ ಸಮೀಪದ ಕೋಡಪದವಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಪ್ರೌಢಶಾಲಾ ಶಿಕ್ಷಣ ಮಂಗಳೂರಿನ ಜೆಪ್ಪುವಿನಲ್ಲಿದ್ದ ಕಾಸಿಯಾ ಪ್ರೌಢಶಾಲೆ ಯಲ್ಲಾಯಿತು.ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನುಪಡೆದರು. ಮಂಗಳೂರು ಶಿಕ್ಷಕ ತರಬೇತಿ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ ತರಬೇತಿ. ವಿಟ್ಲ ಸಮೀಪದ ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಹಾಸ್ಟೆಲ್ ವಿಭಾಗದಲ್ಲಿ ಸಹಾಯಕ ಅಧ್ಯಾಪಕನಾಗಿ ನಿಯುಕ್ತಿಗೊಂಡೆ. ಬಳಿಕ 1980ನೇ ಇಸವಿಯಲ್ಲಿ ಕಾಸರಗೋಡಿನ ...
READ MORE