ಕಾತ್ಯಾಯಿನಿ ಕುಂಜಿಬೆಟ್ಟು ಅವರ ಕವನ ಸಂಕಲನ ‘ನೀನು’. ಪರಂಪರೆಯ ಕುರಿತಾದ ಪ್ರೀತಿ, ಭಾವಲೋಕದ ವಿಸ್ಮಯ ವಿಹಾರ ಸಂಭ್ರಮ, ಪ್ರೀತಿ-ವಿರಹಗಳ ಸುಖ ಸಂವೇದನೆ, ಮಾತೃವಾತ್ಸಲ್ಯ, ಪರಿಸರ ಪ್ರೀತಿ, ಕಲಾವಿದೆಯ ತಾತ್ವಿಕ ತಳಮಳ, ಹೊಸಕಾಲದ ಹೆಣ್ಣಿನ ಸವಾಲುಗಳು ಇಲ್ಲಿಯ ಕವಿತೆಗಳ ವಿಷಯವಸ್ತು. ‘ಕನ್ನಡ ಹಾಗೂ ತುಳು ಪ್ರಾಕ್ತನ ಹಾಗೂ ಆಧುನಿಕ ಸಂಸ್ಕೃತಿಗಳ ಕೆಲವೊಂದು ಎಳೆಗಳಿಂದ ತಾನೇ ಹೆಣೆದುಕೊಂಡ, ಮೇಲ್ನೋಟಕ್ಕೆ ಕೋಮಲವೆಂಬಂತೆ ಕಾಣುವ ಬಿಗಿಯಾದ ಹಗ್ಗದ ಮೇಲೆ ರಂಗಕಲೆ, ಚಿತ್ರಕಲೆ ಹಾಗೂ ಸಂಗೀತಕಲೆಗಳ ಆಶಯಸೂತ್ರಗಳಿಂದ ನಿರ್ಮಿಸಿಕೊಂಡ ಕೆಲವೊಂದು ರೂಪಕಗಳ ತಾಯಿಬೇರುಗಳನ್ನು ಜೋಡಿಸಿ ಸಿದ್ದಪಡಿಸಿಕೊಂಡ ತೋಲ-ಬೆತ್ತವನ್ನು ಜಾಗರೂಕತೆಯಿಂದ ಬಳಸಿಕೊಂಡು, ಹೆಜ್ಜೆ ಮುಂದುವರೆಸುತ್ತಿರುವ ಪ್ರಾಮಾಣಿಕ ಪ್ರಯತ್ನಶೀಲ ಕಲೆಗಾರ್ತಿಯಂತೆ ಕಾತ್ಯಾಯಿನಿ ಇಲ್ಲಿ ಕಾಣಿಸಿಕೊಳ್ಳುತ್ತಾರೆ’ ಎನ್ನುತ್ತಾರೆ ಸಾಹಿತಿ ಜಯರಾಂ.
ಡಾ. ಕಾತ್ಯಾಯಿನಿ ಕುಂಜಿಬೆಟ್ಟು ಅವರ ಹುಟ್ಟೂರು ಉಡುಪಿಯ ಕಾಪು ಬಳಿಯ ಕರಂದಾಡಿ, ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಮುಂಬೈ ಅಖಿಲ ಭಾರತ ಗಂಧರ್ವ ಮಹಾವಿದ್ಯಾಲಯದಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ “ವಿಶಾರದ' ಪದವಿ. ತುಳು ಕಾದಂಬರಿ 'ಕಬರ್ಗತ್ತಲೆ'ಗೆ ತುಳುಕೂಟ(ರಿ) ಉಡುಪಿಯ 'ಪಣಿಯಾಡಿ ಪ್ರಶಸ್ತಿ’, ಕನ್ನಡ ಕಾದಂಬರಿ 'ತೊಗಲುಗೊಂಬೆ'ಗೆ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ 'ಮಲ್ಲಿಕಾ' ಪ್ರಶಸ್ತಿ ಹಾಗೂ ಮೂಡಬಿದರೆಯ ವರ್ಧಮಾನ ಪ್ರತಿಷ್ಠಾನದ 'ಯುವ ವರ್ಧಮಾನ ಪ್ರಶಸ್ತಿ'; 'ಒಳದನಿಯ ಪಲುಕುಗಳು' ವಿಮರ್ಶಾಕೃತಿಗೆ ಕ.ಸಾ.ಪ. ಲೀಲಾವತಿ ಗುರುಸಿದ್ದಪ್ಪ ಸಿಂಧೂರ ದತ್ತಿ ಪ್ರಶಸ್ತಿ, ಡಾ. ದ. ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ದ.ರಾ.ಬೇಂದ್ರೆ ...
READ MORE