ಕೆರೆದಡ

Author : ವಿದ್ಯಾರಶ್ಮಿ ಪೆಲತ್ತಡ್ಕ

Pages 72

₹ 100.00




Year of Publication: 2023
Published by: ಬಹುರೂಪಿ
Address: ಎಂಬೆಸಿ ಸೆಂಟರ್, 111, ಫಸ್ಟ್ ಫ್ಲೋರ್, ಕ್ರೆಸೆಂಟ್ ರಸ್ತೆ, ಕುಮಾರಪಾರ್ಕ್ ಪಶ್ಚಿಮ, ಬೆಂಗಳೂರು- 560001
Phone: 7019182729

Synopsys

‘ಕೆರೆದಡ’ ಪತ್ರಕರ್ತೆ, ಲೇಖಕಿ ವಿದ್ಯಾರಶ್ಮಿ ಪೆಲತ್ತಡ್ಕ ಅವರ ಕವನ ಸಂಕಲನ. ಕೃತಿ ರಚನೆಯ ಅನುಭವವನ್ನು ವಿವರಿಸುತ್ತಾ ಕವನದ ಜೊತೆಗಿನ ನಂಟು ನನಗೆ ಅಚಾನಕ್ಕಾಗಿ ಒದಗಿ ಬಂದದ್ದು. ಪದವಿ ತರಗತಿಯಲ್ಲಿದ್ದಾಗ ಒಂದೆರಡು ಕವನ ಬರೆದದ್ದು, ಬಿಟ್ಟರೆ ಮತ್ತೆ ಅದರ ಸಹವಾಸಕ್ಕೆ ಹೋಗದಿದ್ದವಳು ನಾನು. ಹೇಗಿದ್ದರೂ ಪತ್ರಿಕೆಯ ಕೆಲಸ. ಬರೆದರೆ ಎರಡು ಲೇಖನ ಬರೆದೇನು, ಹೆಚ್ಚೆಂದರೆ ಕಥೆ. ಇಷ್ಟೇ ಅಂತಿದ್ದಾಗ ತಾನಾಗೇ ಬಳಿಬಂದು ಬರೆಸಿಕೊಂಡದ್ದು ಕವನ. ಹಾಗೆ ಒಂದಷ್ಟು ಕವನಗಳಾಗಿ 'ಗೌರೀದುಃಖ ವಾಗಿ ಹೊರಬಂದ ಬಳಿಕ ಇದೀಗ ಎರಡನೆಯ ಸಂಕಲನದ ಹೊಸ್ತಿಲಲ್ಲಿದ್ದೇನೆ ಎಂದಿದ್ದಾರೆ. ಈ ಸಂಕಲನದಲ್ಲಿ ನೆಲದಲ್ಲಿ ಸಿಕ್ಕ ನಗೆ, ನವಜಾತ ಕವನ, ಭಾವನದಿ, ಹಾವು-ಏಣಿ ಆಟ, ಮಧ್ಯಂತರ, ರಿಯರ್ ವ್ಯೂ ಮಿರರ್, ಬೈ ಟು ಕಾಫಿ, ನುಡಿ, ಅವಳೇ ತೆಗೆದ ಅವಳ ಚಿತ್ರ, ಫಾಲೋ, ಹೊಸರುಚಿ, ಹೊಂದಿಸಿ ಬರೆಯಿರಿ, ನೀ ಬರೆದ ನನ್ನ ಮಾತು, ಇಯರ್ ಫೋನ್ ನ ವೈರುಗಳು, ಮಾತು, ಮತ್ತೆ.., ಬೈತಲೆ, ಗ್ರೂಪ್ ಫೋಟೋ, ಚದುರಂಗ, ಬಾಂಬು, ಕದ, ಗುಲಾಬಿ, ಮಾರ್ಜನ, ಕಡಲ ತಡಿಯ ನಡಿಗೆ, ಕೆರೆ-ದಡ, ಶಂಕೆ, ಸಹಿಷ್ಣುತೆ, ನಿರ್ಗಮನ, ಕಲೆ ಒಳ್ಳೆಯದು, ಸಾವಿರದ ಸಾಲುಗಳು, ಚಹಾದ ಜೋಡಿ, ಪ್ರವೇಶ, ಜಂಟಿ, ಮಾರುತಿ ಮಹಿಮೆ, ಸಂಕ, ಕೊನೆಯ ಮಾತು ಕವಿತೆಗಳು ಸಂಕಲನಗೊಂಡಿವೆ.

About the Author

ವಿದ್ಯಾರಶ್ಮಿ ಪೆಲತ್ತಡ್ಕ

ವಿದ್ಯಾರಶ್ಮಿ ಪೆಲತ್ತಡ್ಕ- ದಕ್ಷಿಣ ಕನ್ನಡ-ಕಾಸರಗೋಡು ಗಡಿ ಭಾಗದ ಪೆಲತ್ತಡ್ಕದವರು. ಮಂಗಳೂರು ವಿವಿಯಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಕನ್ನಡ ಪ್ರಭ, ಸುವರ್ಣ ನ್ಯೂಸ್, ವಿಜಯ ನೆಕ್ಸ್ಟ್ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ. ಸದ್ಯ ವಿಜಯ ಕರ್ನಾಟಕ ದಿನಪತ್ರಿಕೆಯ ಲವಲವಿಕೆ ವಿಭಾಗದಲ್ಲಿ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಇವರು ಬರೆದ ಕವನ, ಕಥೆ, ಪ್ರಬಂಧಗಳು ಹಲವೆಡೆ ಪ್ರಕಟವಾಗಿವೆ.  ‘ಗೌರೀದುಃಖ’ ಇವರ ಪ್ರಕಟಿತ ಕವನ ಸಂಕಲನ.  ...

READ MORE

Related Books