ಆತ್ಮಾನುಸಂಧಾನ

Author : ಎ.ಎನ್.ರಮೇಶ್. ಗುಬ್ಬಿ

Pages 212

₹ 225.00




Year of Publication: 2023
Published by: ಗೋಮಿನಿ ಪ್ರಕಾಶನ
Address: ಶ್ರೀ ವೀರಭದ್ರ ಸ್ವಾಮಿ ನಿಲಯ, 1ನೇ ಮುಖ್ಯರಸ್ತೆ,3ನೇ ಅಡ್ಡರಸ್ತೆ, ವಿಶ್ವಣ್ಣ ಲೇಔಟ್, ಶಾಂತಿನಗರ, ತುಮಕೂರು-572102
Phone: 8073007475, 99866 92342

Synopsys

‘ಆತ್ಮಾನುಸಂಧಾನ’ ಎ.ಎನ್.ರಮೇಶ್ ಗುಬ್ಬಿ ಅವರ ಕವನ ಸಂಕಲನವಾಗಿದೆ. ಲೇಖಕಿ ಡಾ. ಸಂಧ್ಯಾ ಹೆಗಡೆ, ದೊಡ್ಡಹೊಂಡ ಅವರು ಕೃತಿಗೆ ಬರೆದಿರುವ ಬೆನ್ನುಡಿ ಹೀಗಿದೆ; ಇದು ರಮೇಶ್ ಗುಬ್ಬಿಯವರ 12ನೇ ಕವನ ಸಂಕಲನ. 15ನೇ ಕೃತಿ. ಜೀವನದ ಹಲವು ಸ್ತರಗಳನ್ನು ದಾಟಿಬಂದ ಜೀವವೊಂದು ‘ಕವಿಭಾವದಿಂದ ತನ್ನ ಅನುಸಂಧಾನ ಮಾಡುವ ಪಕ್ವ ಮನಸೊಂದರ ಒಡನಾಟಕ್ಕೆ ಬರುವ ಅನುಭವಗಳನ್ನು ಇಲ್ಲಿಯ ಕವಿತೆಗಳು ನೀಡುತ್ತವೆ. ರಮೇಶ್ ಗುಬ್ಬಿಯವರ ಇಲ್ಲಿಯ ತನಕದ ಕವಿತೆಗಳು ಜಗತ್ತನ್ನು ಬೆರಗಿನಿಂದ ನೋಡಿದ, ಜೀವನದ ಹಲವು ಸಂಗತಿಗಳನ್ನು ದಾಖಲಿಸಿದ ಕೃತಕೃತ್ಯತೆಯನ್ನು ಪಡೆದವುಗಳಾಗಿದ್ದವು. ಇದು ಅದಕ್ಕಿಂತಲೂ ಭಿನ್ನವಾದ ಪ್ರಯತ್ನ ಎಂಬುದು ಅವರ ಕಾವ್ಯಪ್ರಯಾಣವನ್ನು ಗಮನಿಸುತ್ತಿರುವ ಯಾರೇ ಆದರೂ ಒಪ್ಪತಕ್ಕ ಮಾತು. ರಮೇಶರವರ ಹೆಚ್ಚುಗಾರಿಕೆಯೆಂದರೆ ಇಲ್ಲಿಯ ಕವಿತೆಗಳು ಕೇವಲ ಕಾವ್ಯಪ್ರಯೋಗಗಳಾಗಿ ದಾಖಲುಗೊಂಡಿರುವಂಥವಲ್ಲ; ಬದಲಾಗಿ ಭಾವಾನುಸಂಧಾನದ ನೆಲೆಯಲ್ಲಿ ಅಭಿವ್ಯಕ್ತಿ ಪಡೆದ ಪಡೆದ ಕಾವ್ಯ ಕುಸುಮಗಳು. ಇದರ ಓದೆಂಬ ಪರಾಗಸ್ಫರ್ಶ ಸುಗಂಧಭರಿತವಾಗಿ ನಮ್ಮೆದೆಯನ್ನು ಪಸರಿಸಿ ಅನುಭಾವವನ್ನೂ, ಅದ್ವೈತದ ಸಂವೇದನೆಯನ್ನು ತಾನೇ ತಾನಾಗಿ ಅರಳಿಸಬಲ್ಲ ಚೈತನ್ಯದಾಯಿ ಕಸುವುಳ್ಳಂಥವುಗಳು ಎಂದು ತಿಳಿಸಿದ್ದಾರೆ. 

About the Author

ಎ.ಎನ್.ರಮೇಶ್. ಗುಬ್ಬಿ

ಲೇಖಕ ಎ.ಎನ್.ರಮೇಶ್ ಗುಬ್ಬಿ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದರು. ವೃತ್ತಿಯಲ್ಲಿ ಕಾರವಾರ ಬಳಿಯ ಕೈಗಾದಲ್ಲಿರುವ ಭಾರತೀಯ ಅಣುಶಕ್ತಿ ನಿಗಮದ ಉದ್ಯೋಗಿ. ಪ್ರವೃತ್ತಿಯಲ್ಲಿ ಸಾಹಿತಿ. ಕವನ, ಚುಟುಕು, ಕಥೆ, ನಾಟಕ, ಚಿತ್ರಕಥೆ ರಚನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ‘ಗುಬ್ಬಿಯ ಕಲರವ’, ‘ಚುಟುಕು-ಚಿತ್ತಾರ’, ‘ಎಡನೀರೊಡನೆಯನಿಗೆ ಚುಟುಕು ಪುಷ್ರ್ಪಾಚನೆ’, ‘ಕೇಶವನಾಮ ಚೈತನ್ಯಧಾಮ’ ಎಂಬ ಚುಟುಕು ಸಂಕಲನಗಳು, ‘ಹನಿ-ಹನಿ’ ಎಂಬ ಹನಿಗವನ ಸಂಕಲನ, ‘ಭಾವದಂಬಾರಿ’ ಕಥಾಸಂಕಲನ, ‘ಶಕ್ತಿ ಮತ್ತು ಅಂತ’ ಅವಳಿ ನಾಟಕ ಸಂಕಲನ, ‘ಕಿಸ್ ಮಾತ್ರೆ’ ಎನ್ನುವ ಹಾಸ್ಯಗವನ ಸಂಕಲನ, ‘ಹೂವಾಡಿಗ’, ‘ಕಾಡುವ ಕವಿತೆಗಳು’ ಕವನ ಸಂಕಲನಗಳು ಪ್ರಕಟವಾಗಿದೆ. ಕಾಸರಗೋಡಿನ ಎಡನೀರಿನಲ್ಲಿ ನಡೆದ ಪ್ರಪ್ರಥಮ ಅಂತರರಾಜ್ಯ ಚುಟುಕು ಸಮ್ಮೇಳನದಲ್ಲಿ ‘ಚುಟುಕು ಭಾರ್ಗವ’ ...

READ MORE

Related Books