ಕವಿ ಪರಶುರಾಮ್ ದ್ಯಾವಣ್ಣನವರ ಚೊಚ್ಚಲ ಕವನ ಸಂಕಲನ ಸಗ್ಗದೊಲವು. ಕಾವ್ಯ ಎಂಬುದು ನ್ಯಾಚುರಲ್ ಬ್ಯೂಟಿ ಅದಕ್ಕೆ ಹಲವು ಕಾವ್ಯಲಕ್ಷಣಗಳ ಲೇಪನ ಮಾಡಿದರೆ, ಅದರ ಬ್ಯೂಟಿ ಮತ್ತಷ್ಟು ಇಮ್ಮಡಿಕೊಳ್ಳುತ್ತದೆ. ಕಾವ್ಯ ಸಹ ಹೃದಯನಿಗೆ ರಸಮೃತವನ್ನು ಉಣಬಡಿಸುತ್ತದೆ. ಅಂತ ಕಾವ್ಯ ರಸಾಮೃತವನ್ನು ಓದುಗರಿಗೆ ನೀಡುವ ಪ್ರಯತ್ನ ಮಾಡಿದ್ದಾರೆ. ದ್ಯಾವಣ್ಣನವರ ಒಟ್ಟು ಕಾವ್ಯಗಳಲ್ಲಿ ರೂಪಕ, ಛಂದಸ್ಸು ಮತ್ತು ಅಲಂಕಾರಗಳ ಅಬ್ಬರ ಇಲ್ಲದಿದ್ದರೂ ಕೂಡ ಓದುಗನ ಮನಸೆಳೆಯುವ ಎಲ್ಲಾ ಅಂಶಗಳು ಕಾವ್ಯದಲ್ಲಿ ಅಡಗಿವೆ. ವರ್ತಮಾನಗಳ ಮುಖಮುಖಿ, ಸಾಮಾಜಿಕ ಚಿಂತನೆ, ಸಾಂಸ್ಕೃತಿಕ ಪಲ್ಲಟ ಕಾಲಕಾಲಕ್ಕೆ ಹೇಗೆ ಭಿನ್ನವಾಗುತ್ತವೆ ಎಂಬುದನ್ನ ದಾಖಲಿಸಿದ್ದಾರೆ ಎಂದು ಶಿವಾನಂದ ಕಲಬುರಗಿ ಅವರು ಕೃತಿಯ ಮುನ್ನುಡಿಯ ಮಾತುಗಳಲ್ಲಿ ಬರೆದಿದ್ದಾರೆ.
ಪರಶುರಾಮ್ ದ್ಯಾಮಣ್ಣನವರ್ ಹುಟ್ಟಿದ್ದು ಜೂನ್ 08 1986 ರಲ್ಲಿ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ದಾಗಿನಕಟ್ಟೆ ಗ್ರಾಮದ ಬೇವಿನಹಳ್ಳಿ ದ್ಯಾಮಪ್ಪ ಮತ್ತು ಸುಶೀಲಮ್ಮ ದಂಪತಿಗಳ ಮಗನಾಗಿ ಜನಿಸಿದ ಇವರ ಪ್ರಾರಂಭಿಕ ಶಿಕ್ಷಣ ಹುಟ್ಟೂರಿನಲ್ಲಿ ನಂತರ ಪದವಿ ಶಿಕ್ಷಣ ಶ್ರೀ ಮೃತ್ಯುಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜು ಹೊನ್ನಾಳಿಯಲ್ಲಿ ಪೂರೈಸಿ ಎಂ ಎ ಕನ್ನಡ ಪದವಿಯನ್ನು ಮೈಸೂರು ವಿ ವಿ ಯಲ್ಲಿ ಪೂರೈಸಿ ನಂತರ ಎಸ್ ಎಲ್ ಇ ಟಿ ಹಾಗೂ ನೆಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನ್ಯಾಮತಿಯ ಕನ್ನಡ ವಿಭಾಗದಲ್ಲಿ ಕನ್ನಡ ಬೋಧಕರಾಗಿ ...
READ MORE