‘ಭಾವ ಕಿರಣ’ ಕೃತಿಯು ಕವಿತಾಂಬಿಕ ಜವಳಗಿ ಕಲಬುರ್ಗಿ ಅವರ ಕವನಸಂಕಲನವಾಗಿದೆ. ಈ ಕೃತಿಗೆ ಬೆನ್ನುಡಿ ಬರೆದಿರುವ ಸತೀಶ್ ಕುಮಾರ್ ಹೊಸಮನಿ ಅವರು, ಭಾವ ಕಿರಣ ಕವನಗಳ ಸಂಕಲನ ಕೃತಿಯೂ ಭಾವನೆಗಳ ಸಾಗರವಾಗಿದೆ. ಇಲ್ಲಿ ಕವಿಯೂ ತನ್ನ ಹೃದಯಾಂತರಳದಿಂದ ಬಂದ ಚಿಂತನೆಗಳು ಭಾವನಾತ್ಮಕವಾಗಿ ಬರೆದು ಇಡುವಲ್ಲಿ ಯಶಸ್ವಿಯಾಗಿದ್ದಾರೆ. ಸಂವೇದನಶೀಲ ಹೆಣ್ಣು ಮಕ್ಕಳ ವಿಚಾರಗಳನ್ನು ಕವನ ರೂಪಕ್ಕೆ ತಂದಿದ್ದಾರೆ. ಈ ಕವನಗಳಲ್ಲಿ ಪ್ರೀತಿ ಪ್ರೇಮ ಆತ್ಮೀಯತೆ ಹಾಗೂ ವೈಚಾರಿಕತೆ ಮುಪ್ಪರಿ ಗೊಂಡಿವೆ. ಒಂದು ಹೆಣ್ಣಿನ ಮನದಾಳದ ಮಾತುಗಳು ಒಡಲಾಳದ ಭಾವನೆಗಳನ್ನು ಹಿಡಿದಿರುವ ಪ್ರಯತ್ನ ಮಾಡಿದ್ದಾರೆ. ಆದರೆ ಈ ಕೃತಿಯಲ್ಲಿ ನೋವಿಗಿಂತ ನಲಿವಿನ ಪ್ರಸಂಗಗಳು ಹೆಚ್ಚಾಗಿವೆ. ಪ್ರೇಮ ನಿವೇದನೆ. ನಿಸರ್ಗ ರಮಣೀಯತೆ ಪ್ರಾಕೃತಿಕ ಸೌಂದರ್ಯ ಪ್ರಜ್ಞೆ ,ಹೆಂಗರಳಿನ ತಾಯಿತನ, ಹೆಣ್ಣು ಗಂಡಿನ ನಡುವಿನ ಒಲವಿನ ಪ್ರಸಂಗ ರೂಪ ಹಾಗೂ ರಾಗ ಮತ್ತು ಅನುರಾಗದ ಸಂಯೋಗವೇ ಈ ಕವನದ ತಿರುಳು. ಕವಿತೆಗಳು ಪ್ರೇಮ ಕಾಶ್ಮೀರದ ದೃಶ್ಯ ಕಣ್ಣೆದುರು ತಂದು ನಿಲ್ಲಿಸುವುದು. ಒಲವು ಮೂಡಿದಾಗ ಹೃದಯ ಹಾಡಿದಾಗ ಪ್ರೇಮ ಅಂಕುರಿಸಿದಾಗ ಉದ್ಬವಿಸಿದಾಗ ಆಗುವ ಭಾವನೆಗಳನ್ನು ಇಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇಲ್ಲಿನ ಕವನಗಳನ್ನು ಓದಿದಾಗ ಹಸಿ ಬಿಸಿ ಪ್ರೇಮಭಾವನೆಗಳು ಪರಿಪಕ್ವತೆ ಗೊಂಡು ಪರಿಪೂರ್ಣತೆಯತ್ತ ಕೊಂಡೊಯುತ್ತವೆ. ಇಲ್ಲಿ ಹೆಣ್ಣು ಮತ್ತು ಗಂಡು ಪರಿತಪಿಸುವ ವಿರಹ ವೇದನೆ ಕೂಡ ಇದೆ. ನವರಸ ಭಾವ ಕಿರಣ ಎನ್ನುವುದು ಸುಳ್ಳಲ್ಲ. ಮಹಿಳೆ ತನ್ನ ಭಾವ ಎಲ್ಲೆ ಮೀರಿ ಪುರುಷ ಮನಭಾವ ನಿಂತು ನೋಡಿ ಬರೆದ ಹಾಗೆ ಅದೆಷ್ಟೋ ಕವಿತೆಗಳನ್ನು ನೋಡ್ತಾ ಅಚ್ಚರಿಯಾಗುತ್ತದೆ. ಪ್ರೀತಿ ಪ್ರೇಮದ ಪರಿಯ ಸುತ್ತ ಸುತ್ತುವ ಈ ಕವನಗಳ ಮೊತ್ತ ಯುವಜನತೆ ಚಿತ್ತ ಸೆಳೆಯುತ್ತದೆ. ಇಲ್ಲಿನ ಪ್ರತೀ ಕವನಗಳು ಜೇನಹನಿಗಳಂತೆ ಗೋಚರಿಸುತ್ತವೆ. ಇವುಗಳನ್ನು ಉಪ್ಪಿನಕಾಯಿ ತರಹ ಚಪ್ಪರಿಸಬಹುದು ಎಂದಿದೆ.
ಕವಿತಾಂಬಿಕ ಜವಳಗಿ ಅವರು ಮೂಲತಃ ಕಲಬುರಗಿಯವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರವಾಗಿದೆ. ಕಥೆ, ಕಾದಂಬರಿ, ಲೇಖನ, ಕವಿತೆ. ಹನಿಗವನ ಮತ್ತು ಹಾಯ್ಕುಗಳ ರಚನೆ ಅವರ ಹವ್ಯಾಸ. ಕೃತಿಗಳು : ಭಾವ ಕಿರಣ ...
READ MORE