ಲೇಖಕ ವೀರೇಶ ಜಿ. ಮೇಟಿ ಅವರು ಮೂಲತಃ ಬಾಗಲಕೋಟೆಯ ಹುನಗುಂದ ತಾಲೂಕಿನ ನಾಗೂರ ಗ್ರಾಮದವರು. ಎಂ.ಎ, ಬಿ.ಇಡಿ ಪದವೀಧರರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಗುಳದಳ್ಳಿಯಲ್ಲಿ ಸಹ ಶಿಕ್ಷಕರು. ಕೊಪ್ಪಳ ಜಿಲ್ಲೆಯ ಆಂಗ್ಲ ಸಂಪನ್ಮೂಲ ವ್ಯಕ್ತಿಯಾಗಿದ್ದಾರೆ. ರಾಜ್ಯಮಟ್ಟದ ಕಬಡ್ಡಿ ಆಟಗಾರರೂ ಹೌದು. ಬೆಂಗಳೂರು, ದೆಹಲಿ, ಅಸ್ಸಾಂಗಳಲ್ಲಿ ವಿವಿಧ ತರಬೇತಿಗಳಲ್ಲಿ ಕೊಪ್ಪಳವನ್ನು ಪ್ರತಿನಿಧಿಸಿದ್ದಾರೆ.