ಮೌಢ್ಯವನ್ನು ವಿರೋಧಿಸುವ ಅನೇಕ ಬರಹಗಳು, ಪ್ರಬಂಧಗಳು ಬಂದಿವೆ. ಆದರೆ ವೈಚಾರಿಕತೆಗೆ ಮೀಸಲಾದ ಕವನಗಳನ್ನು ಪ್ರತ್ಯೇಕವಾಗಿ ತಂದಿರುವವರು ವಿರಳ. ಅಂತಹ ವಿರಳ ಕವಿಗಳಲ್ಲಿ ಎಸ್. ಮಂಜುನಾಥ ಒಬ್ಬರು.
ಹಾಡಲೂ ಸಾಧ್ಯವಿರುವ ಇಲ್ಲಿನ ಕವನಗಳು ವೈಚಾರಿಕ ಸಂಘಟನೆಗೂ ಸ್ಫೂರ್ತಿದಾಯಕವಾಗಿವೆ. ಅದೃಷ್ಟ ಅನಿಷ್ಟ, ಅದೃಷ್ಟ ಸಂಖ್ಯೆ, ಜಾತಕ ಚೌಕು, ಮೂಲಾನಕ್ಷತ್ರ, ರಾಹುಕಾಲ, ಮೌಡ್ಯನಿಷೇಧ, ಜನ್ಮ ನಕ್ಷತ್ರ, ನಿಂಬೆಹಣ್ಣು, ಹಸ್ತ ಪುರಾಣ, ಹಲ್ಲಿ ಶಕುನ, ಜಗದ್ಗುರು, ಜಾತಿಗೊಂದು ಸ್ಮಶಾನ, ವೈಜ್ಞಾನಿಕತೆ ಇಂತಹ ಶೀರ್ಷಿಕೆಗಳಿರುವ ಕವನಗಳು ಓದುಗರಿಗೆ ಮುದ ನೀಡುತ್ತವೆ, ಅರಿವು ಮೂಡಿಸುತ್ತವೆ.
ವಿಜ್ಞಾನ ಲೇಖಕ ಎಸ್. ಮಂಜುನಾಥ ಅವರು ‘ಮೇಡಂ ಕ್ಯೂರಿ ವಿಜ್ಞಾನ ಅಕಾಡೆಮಿ’ಯನ್ನು ಸ್ಥಾಪಿಸಿ, ಕಳೆದೊಂದು ದಶಕದಿಂದ ವಿದ್ಯಾರ್ಥಿ ಹಾಗೂ ಯುವ ಜನತೆಯಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಮತ್ತು ವೈಚಾರಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಇವರು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬೆಂಗಳೂರಿನ ಜವಹರಲಾಲ್ ನೆಹರು ಉನ್ನತ ವಿಜ್ಞಾನ ಸಂಶೋಧನ ಕೇಂದ್ರದ ಅಂತರರಾಷ್ಟ್ರೀಯ ವಸ್ತು ವಿಜ್ಞಾನ ಕೇಂದ್ರದಿಂದ ವಸ್ತು ವಿಜ್ಞಾನದಲ್ಲಿ ಪಿ.ಜಿ. ಡಿಪ್ಲೋಮಾವನ್ನೂ ಪಡೆದಿದ್ದಾರೆ. ವಿಶ್ವವಿಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಜೊತೆ ಸಂಶೋಧನೆಗಳನ್ನು ನಡೆಸಿ, ಲೇಖನಗಳನ್ನು ಪ್ರಕಟಿಸಿದ ಹೆಗ್ಗಳಿಕೆ ಇವರದು. ‘ಚುಕ್ಕಿ ಚಂದ್ರಮ, ಚಿವ್ ಚಿವ್ ಗುಬ್ಬಿ, ವೈಚಾರಿಕ ಕವನಗಳು’ ...
READ MORE