ನೀಲಾವರ ಸುರೇಂದ್ರ ಅಡಿಗ ಅವರ ‘ಸೂರಿ ಮಾಣಿ’ ಕೃತಿಯು ಅನುಭವ ಗುಚ್ಛಗಳ ಲೇಖನ ಸಂಕಲನವಾಗಿದೆ. ಈ ಕೃತಿಯು ಲೇಖಕರ ಹೋಟೆಲ್ ಜೀವನದ ಅಮೂಲ್ಯ ಹಾಗೂ ಅಪರೂಪವಾದ ಅನುಭವಗಳನ್ನು ತಿಳಿಸುತ್ತದೆ. ಸಂಕಷ್ಟಗಳ ಕಾಲದಲ್ಲಿಯೂ ಸಮಾಧಾನಕರವಾಗಿ ಆಲೋಚಿಸಿ ಸಂತೋಷದ ಮತ್ತು ಸಮೃದ್ಧಿ ಬದುಕನ್ನು ಕಾಣಲು ಸಾಧ್ಯ ಎಂಬುದು ಅವರ ಈ ಅನುಭವಗಳ ಹಾದಿಯಲ್ಲಿ ಕಂಡುಕೊಂಡ ಸತ್ಯ. ಎಲ್ಲರ ನೆನಪಿನ ಬುತ್ತಿಯು ಸುಖದ ನೆನಪುಗಳನ್ನು ಕಷ್ಟದ ಅನುಭವಗಳನ್ನು ಮನಸ್ಸಿನಲ್ಲಿ ಮತ್ತು ಮನೆಗಳಲ್ಲಿ ಕಾಪಿಟ್ಟುಕೊಳ್ಳುವ ಸಂದರ್ಭಗಳು ಇರುತ್ತವೆ ಎಂದು ಈ ಕೃತಿಯು ತಿಳಿಸುತ್ತದೆ. ಅಡಿಗರು ಬಾಲ್ಯದಲ್ಲಿ ಅನುಭವಿಸಿದ ವಿವಿಧ ಘಟ್ಟಗಳು ಮತ್ತು ಬೆಂಗಳೂರಿನಲ್ಲಿ ಹೋಟೆಲ್ ಮಾಣಿಯಾಗಿ ಗ್ರಹಿಸಿದ ಅನೇಕ ಸಂದರ್ಭಗಳನ್ನು ಅಕ್ಷರರೂಪದಲ್ಲಿ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ನೀಲಾವರ ಸುರೇಂದ್ರ ಅಡಿಗರು ಶಿಕ್ಷಣ, ಸಾಹಿತ್ಯ, ಸಂಘಟನೆಯಲ್ಲಿ ತಮ್ಮ ಛಾಪು ಮೂಡಿಸಿದವರು. ಅವರ ಐವತ್ತೈದು ಪುಸ್ತಕಗಳು ಪ್ರಕಟವಾಗಿವೆ. ಶೈಕ್ಷಣಿಕವಾಗಿ ಪಠ್ಯಪುಸ್ತಕರಹಿತ ಕಲಿಕೆಯ ಚಿಂತನೆ, ಅನುಷ್ಠಾನವೇ ಮೊದಲಾದ ಪ್ರಗತಿಪರ ಚಿಂತಕರು, ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ಸಾಹಿತಿಗಳಾಗಿ, ಉತ್ತಮ ವಾಗ್ಮಿಯೂ ಹೌದು. ಸಂಘಟಕರಾಗಿ ನಾಡಿನಾದ್ಯಂತ ಶಿಕ್ಷಕರಿಗೆ, ಸಹೃದಯರಿಗೆ ಪರಿಚಿತರು. ಇವರ ’ಕಿಟ್ಟಜ್ಜಿ ಮತ್ತು ಹವಿಸ್ಸು ಪಾತ್ರೆ’ ಈ ಪುಸ್ತಕ ಹತ್ತು ವರ್ಷಗಳ ಕಾಲ ICSE ಶಾಲೆಯ ಹತ್ತನೆಯ ತರಗತಿಗೆ ಪಠ್ಯಪುಸ್ತಕವಾಗಿತ್ತು. ಬೋಧನೆ ಮತ್ತು ಕಲಿಕೆಯ ಸಾಮಗ್ರಿ ’ಹೊಸ ದಿಶೆಯ ಬೆಳಕು’ ಕೃತಿಯನ್ನು ...
READ MORE