ಕಪ್ಪು ನೆಲದ ಕೆಂಪುಗಾಥೆ

Author : ಇಮ್ತಿಯಾಜ್‌ ಹುಸೇನ್‌

Pages 232

₹ 200.00




Year of Publication: 2022
Published by: ಸಹನಾ ಪ್ರಕಾಶನ
Address: ಸಹನಾ ಪ್ರಿಂಟರ್ಸ್, ಮುಸ್ಲಿಂ ಹಾಸ್ಟಲ್ ಕಾಂಪೆಕ್ಸ್, ದಾವಣಗೆರೆ
Phone: 9844110454

Synopsys

‘ಕಪ್ಪು ನೆಲದ ಕೆಂಪುಗಾಥೆ’ ಲೇಖಕ ಇಮ್ತಿಯಾಜ್ ಹುಸೇನ್ ಅವರ ಅನುಭವ ಕಥನ. ಈ ಕೃತಿಗೆ ರಹಮತ್ ತರೀಕೆರೆ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಒಂದು ಕಾಲಕ್ಕೆ ಬಟ್ಟೆಗಿರಣಿಗಳಿಗೂ ಕಾರ್ಮಿಕ ಹೋರಾಟಗಳಿಗೂ ಕಾರ್ಮಿಕರ ನಾಯಕತ್ವಕ್ಕೂ ಪ್ರಯೋಗಶಾಲೆಯಾಗಿದ್ದ ದಾವಣಗೆರೆ ಶಹರದ ಅರ್ಧಶತಮಾನದ ಚರಿತ್ರೆಯಿದು’ ಎಂದಿದ್ದಾರೆ. ಜೊತೆಗೆ ಘಟನೆಗಳನ್ನು ನಿರೂಪಿಸುವ ಮತ್ತು ಪಾತ್ರಗಳನ್ನು ಚಿತ್ರಿಸುವ ಲೇಖಕರ ಪ್ರತಿಭೆಯಿಂದ ಇದು ದುಡಿದ ಜನರ ಕಥನವಾಗಿದೆ. ಇದನ್ನು ಓದುವಾಗ ಬಸವರಾಜ ಕಟ್ಟೀಮನಿಯವರ ಜ್ವಾಲಾಮುಖಿಯ ಮೇಲೆ ಕಾದಂಬರಿ ನೆನಪಾಗುತ್ತದೆ. ಇಲ್ಲಿ ಸಾಮಾನ್ಯ ಜನರು ನಾಯಕರಾಗಿ ರೂಪುಗೊಳ್ಳುವ ವಿವರಗಳು ಪ್ರಜಾಪ್ರಭುತ್ವದ ಚೆಲುವಿನ ಪಾಠಗಳಂತಿವೆ. ಇಲ್ಲಿ ಕಾರ್ಮಿಕರ ಗೆಲುವು, ಗೊಂದಲ, ವೈರುಧ್ಯ ಮತ್ತು ಪತನದ ಸಂಗತಿಗಳಿವೆ. ಕರ್ನಾಟಕದ ಒಂದು ಕೈಗಾರಿಕಾ ನಗರವು ಚಾರಿತ್ರಿಕ ಒತ್ತಡಗಳಲ್ಲಿ ರೂಪಾಂತರಗೊಂಡ ಕಥನವನ್ನು, ಜಗತ್ತಿನ, ದೇಶದ ಮತ್ತು ಪ್ರಾದೇಶಿಕವಾದ ರಾಜಕೀಯ- ಆರ್ಥಿಕ-ಸಾಮಾಜಿಕ ವಿದ್ಯಮಾನಗಳ ಭಿತ್ತಿಯಲ್ಲಿ ಲೇಖಕರು ಕಟ್ಟಿಕೊಡುತ್ತಾರೆ. ಲೇಖಕರ ಸ್ವಂತ ಅನುಭವ, ಕಾಳಜಿ, ಆತ್ಮವಿಮರ್ಶೆ, ವ್ಯಂಗ್ಯ ಮತ್ತು ಹರಿತವಾದ ರಾಜಕೀಯ ಪ್ರಜ್ಞೆಗಳಿಂದ ಇದೊಂದು ಅಪರೂಪದ ರಾಜಕೀಯ ಪಠ್ಯವಾಗಿದೆ. ಇದನ್ನು ಓದಿದ ಮೇಲೆ, ದುಡಿವ ಜನರು ಮಾಡಿದ ರಾಜಕೀಯ ಪ್ರಯೋಗದ ಹೆಮ್ಮೆ, ಅದರ ಸಾಧನೆಯ ಸಂತೋಷ ಮತ್ತು ಅಸ್ಥಿತ್ವ ಕಳೆದುಕೊಂಡ ವಿಷಾದ ಭಾವ ಮನಸ್ಸನ್ನು ಆವರಿಸಿಕೊಳ್ಳುತ್ತದೆ ಎಂದಿದ್ದಾರೆ. 

About the Author

ಇಮ್ತಿಯಾಜ್‌ ಹುಸೇನ್‌

ಇಮ್ತಿಯಾಜ್‌ ಹುಸೇನ್‌ ದಾವಣಗೆರೆಯ ಸಿ.ಪಿ.ಐ ಪಕ್ಷದ ಕಾರ್ಯಕರ್ತ. ಚಿತ್ರದುರ್ಗದ ಅತ್ಯಂತ ಬಡ ಕುಟುಂಬದಲ್ಲಿ ಜನಿಸುವ ಲೇಖಕರು ಚಿಕ್ಕಂದಿನಿಂದಲೇ ಹೋರಾಟಗಳಲ್ಲಿ ಸಕ್ರಿಯವಾಗಿದ್ದರು. ರಾಜಕೀಯ ಬದುಕಿನಲ್ಲಿ ಬಿ.ಎಸ್.ಪಿ ಹಾಗೂ ಕ್ರಾಂಗೆಸ್‌ ಪಕ್ಷಕ್ಕೆ ಬಂದರೂ ಕಮ್ಯೂನಿಸ್ಟ್‌ ಪಕ್ಷದ ವ್ಯಾಮೋಹ ಬಿಟ್ಟಿಲ್ಲ. 'ಹೆಜ್ಜೆ ಗುರುತುಗಳು' ಇವರ ಆತ್ಮಕಥನವಾಗಿದ್ದು, ಈ ಕೃತಿಯಲ್ಲಿ ತಮ್ಮ ಜೀವನದ ಕುರಿತ ಹಲವಾರು ವಿಚಾರಗಳನ್ನು ಹಾಗೂ ಧೋರಣೆಗಳನ್ನು ಪ್ರಸ್ತುತಪಡಿಸಿದ್ದಾರೆ. ...

READ MORE

Related Books