ಕರ್ನಾಟಕ ಲೇಖಕಿಯರ ಸಂಘದ ಡಾ. ಕೆ. ಆರ್. ಸಂಧ್ಯಾರೆಡ್ಡಿ ಮತ್ತು ಡಾ. ಗೀತಾ ಶೆಣೈ ಅವರು ಸಂಪಾದಿಸಿದ ಲೇಖನ ಸಂಗ್ರಹ-ದೇವರು ಧರ್ಮದ ಚಿಂತೆ. ಕರ್ನಾಟಕ ಲೇಖಕಿಯರ ಸಂಘವು ಆಯೋಜಿಸಿದ ‘ಮಹಿಳೆ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಮಾನತೆ’ ಸಂವಾದ ಕಾರ್ಯಕ್ರಮದಲ್ಲಿ ವಿವಿಧ ಲೇಖಕಿಯರು ಮಂಡಿಸಿದ ಅಭಿಪ್ರಾಯಗಳನ್ನು, ಹಾಗೂ ನಾಡಿನ ವಿವಿಧ ಭಾಗಗಳ ಲೇಖಕಿಯರ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದ ಕೃತಿ ಇದು.
ಕಮಲಾ ಹಂಪನಾ, ಬಿ.ಟಿ. ಲಲಿತಾ ನಾಯಕ್, ಎಚ್.ಎಸ್. ಪಾರ್ವತಿ, ಎಸ್.ವಿ. ಪ್ರಭಾವತಿ, ಸಾರಾ ಅಬೂಬಕ್ಕರ್, ಎಸ್. ಜಿ. ಸುಶೀಲಮ್ಮ ಮೊದಲಾದ ಹಿರಿಯರ ಲೇಖನಗಳಿವೆ. ಜೊತೆಗೆ, ಕೆಲವು ಕವನಗಳನ್ನು ಮತ್ತು ಜನಪದ ಗೀತೆಗಳನ್ನು ಕೂಡ ಕೃತಿಯಲ್ಲಿ ಸೇರಿಸಲಾಗಿದೆ.
ಗೀತಾ ಶೆಣೈ ಕನ್ನಡದ ಪ್ರಮುಖ ಲೇಖಕಿ. ಇವರು 1954 ಜೂಬ್ 13 ರಂದು ದಕ್ಷಿಣ ಜಿಲ್ಲೆಯಲ್ಲಿ ಜನಿಸಿದರು. ಹಂಪಿಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಪಿಹೆಚ್.ಡಿ, ಪದವಿ ಪಡೆದಿದ್ದಾರೆ. ಇಂದಿರಾಗಾಂಧಿ ಮಹಿಳಾ ಅಧ್ಯಯನದಲ್ಲಿ ಸಿಡಬ್ಲ್ಯೂಇಡಿ ಕೋರ್ಸ್ ಮುಗಿಸಿದ್ದಾರೆ, ಜೀವನ ಚರಿತ್ರೆ, ಅನುವಾದ ಮತ್ತು ಮಹಿಳಾ ಅಧ್ಯಯನ ಇತ್ಯಾದಿ ಪ್ರಕಾರಗಳಲ್ಲಿ 20ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಇವರ ಮೊದಲ ಕೃತಿ ಝುಂಪಾ ಲಾಹಿರಿಯವರ ಇಂಟರ್‍ಪ್ರಿಟರ್ ಆಫ್ ಮ್ಯಾಲಡೀಸ್ ಕಥಾಸಂಕಲನದ ಅನುವಾದ `ಬೇನೆಗಳ ದುಭಾಷಿ'. ಬೇನೆಗಳ ದುಭಾಷಿ, ಪರಿಸರ ಅರ್ಥಶಾಸ್ತ್, ಮಧ್ಯಕಾಲೀನ ಭಾರತ, ಸಮಾಜಶಾಸ್ತ್ರದ ಸ್ಥಾಪಕ ಪಿತಾಮಹರು, ಪ್ರಾರಂಭಿಕ ಹಂತದ ...
READ MORE