`ಕಾವ್ಯಾನುಸಂಧಾನ' ನಿಜಲಿಂಗಪ್ಪ ಮಟ್ಟಿಹಾಳ್ ಅವರ ಕೃತಿಯಾಗಿದೆ. ನವೋದಯದ ಉತ್ಕರ್ಷದ ಕಾಲದಿಂದ ಮುಂದಿನ ನವೋತ್ತರದವರೇಣನ ಕನ್ನಡ ಕಾವ್ಯದ ಹಲವಾರು ಹೊರಳುವಿಕೆಗಳೊಂದಿಗೆ ಕಏಯಾಗಿ ಬೆಳೆದಿರುವ ಡಾ. ಎನ್. ಆರ್. ನಾಯಕರು ಹತ್ತರಲ್ಲಿ ಹನ್ನೊಂದಾಗದೇ ಸ್ವಂತದ ದನಿಗಾಗಿ ಹಂಬಲಿಸಿದ ಅನನ್ಯತೆಯ ಕವಿ. 'ನೂರು ಜನ ನೂರು ತರ ನಾನೇಕೆ ಇರಬೇಕು ನಿನ್ನ ತರ?' ಎನ್ನುವ ಅಸ್ಮಿತೆಯ ಹಂಬಲ ನಾಯಕರ ಕಾವ್ಯವನ್ನು ಭಿನ್ನವಾಗಿಸಿದೆ. ದೇಸೀ ಸಂಸ್ಕೃತಿಯ ಮೂಲಸೆಲೆಗಆಂದ ಸಮೃದ್ಧಗೊಂಡಿರುವ ಜೀವನ ಶ್ರದ್ಧೆ ನಾಯಕರ ಕಾವ್ಯದ ಜೀವಂತಿಕೆ. ಜಾನಪದ ವಿದ್ವಾಂಸರೆಂದು ಕನ್ನಡ ವಿದ್ವತ್ ಲೋಕಕ್ಕೆ ಸುಪಲಚಿತರಾಗಿರುವ ಡಾ. ಎನ್. ಆರ್. ನಾಯಕ ಅವರು ಮೂಲತಃ ದೇಸೀಪ್ರತಿಭೆಯ ಸೃಜನಶೀಲ ಕವಿಗಳು. ಜನಪದರ ಜೀವನಪ್ರೀತಿ, ಭಾವಸಮೃದ್ಧಿ, ಉಲ್ಲಾಸ ಉತ್ಸಾಹಗಳೊಂದಿಗೆ ಬದುಕಿನ ಕಳೆ ಹೊಳೆಗಳ ಅಲ್ಲಲವ್ಯದಲ್ಲಿ ಕಾದು ಅರಳುವ ಧೀಶಕ್ತಿ ಅವರ ಕಾವ್ಯದ ನೈತಿಕ ಕೇಂದ್ರವಾಗಿದೆ. ಅಂತೆಯೇ ನಿತ್ಯಬದುಕಿನ ನೂರು ಹದಗಳು ಪದಗಳಾ, ಅರವೆ, ಹೀಗೆ ವೈರುದ್ಧ ವೈವಿಧ್ಯಗಳ ಸಪ್ತವರ್ಣಗಳ ಕಾಮನಲ್ಲಿನ ಸಹಜ ಮೇಳ ಅವರ ಕಾವ್ಯಕ್ಕೆ ದಕ್ಕಿದೆ. ನಿಸರ್ಗದ ಸಹಜ ಲಯಗಳನ್ನು ದೇಸೀ ಸಂಸ್ಕೃತಿಯ ನೈಜತೆ-ನಿರಾಡಂಬರತೆಯನ್ನು ತಮ್ಮ ಬುದ್ಧಿ-ಭಾವದ ಬುತವಾಗಿಸಿಕೊಂಡಿರುವ ನಾಯಕರಿಗೆ ಬದುಕು ಆನಂದ-ಆರಾಧನೆಯ ಸಂಗತಿಯಾದರೆ, ಕಾವ್ಯ ಅತ್ಯಶೋಧನೆಯ ಅಂತರಂಗದ ಬೆಳಕಾಗಿದೆ. ಆತು-ಕೆಡುಕಿನ ಒರೆಗಲ್ಲಿನ ವೈಚಾಲಕತೆ-ವಾತ್ಸವತೆಯ ಪ್ರಖರತೆಲಂತ ಕನವನ್ನು ರಸವಾಗಿಸಿಕೊಳ್ಳುವ ಆತ್ಮಸಂಯಮವು ನಾಯಕರ ಕಾವ್ಯಕ್ಕೆ ತಾಟಕ-ಬಾಲಕೆಯ ಗುಣವನ್ನು, ಅತ್ಯಸಂವಾದದ ಆಳವನ್ನು ತುಂಬಿದೆ. ಮುಗ್ಧತೆ-ಮಾನವೀಯತೆ, ಮೌಲ್ಯ-ಶ್ರದ್ಧೆಗಳು ನೋವು ನಿರಾಶೆಯ ಜರುಗಾಆಯಲ್ಲಿ ಬದುಕು ತರಗೆಲೆಯಾಗದಂತೆ ಕಾಪಿಡುವ ಧೃತಿಶಕ್ತಿಯನ್ನು ನೀಡಿದೆ ಎನ್ನುತ್ತಾರೆ ಶಾಂತಾ ಇಮ್ರಾಪೂರ.