ಮಾತು ಮಾತು ಮಥಿಸಿ

Author : ಮೇಟಿ ಮಲ್ಲಿಕಾರ್ಜುನ

Pages 396

₹ 380.00




Year of Publication: 2021
Published by: ದೇಸಿ ಪ್ರಕಾಶನ
Address: #121,13ನೇ ಮುಖ್ಯರಸ್ತೆ, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-560040

Synopsys

‘ಮಾತು ಮಾತು ಮಥಿಸಿ’ ಕೃತಿಯು ಮೇಟಿ ಮಲ್ಲಿಕಾರ್ಜುನ ಅವರ ಕರ್ನಾಟಕ ಓದು ಮತ್ತು ದೇಶೀಯತೆಯನ್ನು ಒಳಗೊಂಡಂತಹ ಲೇಖನ ಸಂಕಲನವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಅಮರೇಶ ನುಗಡೋಣಿ ಅವರು, ಲೇಖಕ ಮೇಟಿ ಮಲ್ಲಿಕಾರ್ಜುನ ಯುವ ನುಡಿ ಚಿಂತಕರಲ್ಲಿ ಪ್ರಮುಖರು. ‘ಕರ್ನಾಟಕ ಓದು’ ಬಳಗದಲ್ಲಿದ್ದು, ಅದರ ತಿರುಳನ್ನು ತಮ್ಮ ಪ್ರತಿ ಬರೆಹದಲ್ಲಿ ಒರೆಗೆ ಹಚ್ಚುತ್ತ ತಿಳಿಗೊಳಿಸುವ ಕಾಯಕದಲ್ಲಿ ಕ್ರಿಯಾಶೀಲರಾಗಿರುವುದು ಈ ಕೃತಿಯ ಪುಟಗಳಲ್ಲಿ ನಾನು ನೋಡು ಮನಗಂಡಿದ್ದೇನೆ. ಅವರ ನಡಿಗೆಗೆ ದಾರಿಯಿಲ್ಲ. ನಡೆಯುತ್ತಲೇ ದಾರಿ ಮೂಡಿಸುತ್ತಿದ್ದಾರೆ. ಅವರ ಬರೆಹಗಳ ನೆಲೆಯಿರುವುದು. ಕರ್ನಾಟಕ ಓದು’ ವೈಧಾನಿಕತೆಯಲ್ಲಿ ನುಡಿ ಮೂಲಕ ಕರ್ನಾಟಕ ಸಮುದಾಯವನ್ನು ಒಂದೆಂದು ಭಾವಿಸಿ ಅದರ ನಾಡಿ ಹಿಡಿದು ಗ್ರಹಿಸುವ ಈ ಹಾದಿಯೇ ಕಠಿಣವಾದದ್ದು. ಕರ್ನಾಟಕ ಸಮುದಾಯವನ್ನು ಬಿಡಿಯಾಗಿ ನೋಡದೇ ಇಡಿಯಾಗಿ ಅರಿಯುವ ಯತ್ನವೇ ಸವಾಲಿನದು. ಒಂದಷ್ಟು ದೂರ ನಡೆದಿರುವರು ನಿಜ. ಪ್ರತಿ ಹೆಜ್ಜೆಗಳ ನಡಿಗೆಯಲ್ಲಿ, ಹಿಂದಿನ ಹೆಜ್ಜೆಗಳ ಬಲ ಕುಂದದಂತೆ ನೋಡಿಕೊಳ್ಳುತ್ತಿದ್ದಾರೆ. ಅವರ ಬಳಗ ರೂಪಿಸುತ್ತಿರುವ ‘ಕರ್ನಾಟಕ ಓದಿ’ ನ ಮಾದರಿ ಕನ್ನಡ ಸಾಹಿತ್ಯ ಸಂಸ್ಕೃತಿಯ ಗ್ರಹಿಕೆಗೆ ಹೊಸತನ ಮೂಡಿದೆ ಎಂದಿದ್ದಾರೆ. ಮೇಟಿಯವರು ವಾಗ್ವಾದಗಳನ್ನು ಬೆಳೆಸುವ ಇಲ್ಲವೇ ಪೂರ್ವಪಕ್ಷವೊಂದನ್ನು ಕಟ್ಟಿ ಅದಕ್ಕೆ ಪರ್ಯಾಯವಾದ ಚಿಂತನೆಯನ್ನು ಬೆಳೆಸುವ ಬಗೆಯಲ್ಲಿ ತಮ್ಮ ಬರಹಗಳನ್ನು ಬೆಳೆಸುವುದಿಲ್ಲ. ಯಾವ ಸಂದರ್ಭವು ಅವರ ವಿಷಯಗಳ ಆಯ್ಕೆಗೆ ಕಾರಣವಾಗಿದೆಯೋ ಆ ಸಂದರ್ಭವನ್ನು ಹಿನ್ನೆಲೆಗೆ ಇರಿಸಿಕೊಂಡು ತಮ್ಮ ವಿಚಾರಗಳನ್ನು ಬೆಳೆಸುತ್ತಾರೆ ಭಾಷೆಯನ್ನು ಕೇಂದ್ರದಲ್ಲಿ ಇರಿಸಿಕೊಂಡ ಅವರ ಇಲ್ಲಿನ ಬರಹಗಳಲ್ಲಿ ಈ ವಿಧಾನವನ್ನು ನಾವು ಕಾಣಬಹುದು. ಕೇವಲ ಮಾಹಿತಿಗಳನ್ನು ಒದಗಿಸುವ ನೆಲೆಗೆ ಅವರ ವಿಚಾರ ಮಂಡನೆ ಸೀಮಿತವಾಗುವುದಿಲ್ಲ. ಮಾಹಿತಿಗಳ ವಿಶ್ಲೇಷಣೆ, ವ್ಯಾಖ್ಯಾನಗಳನ್ನೂ ಗುರಿಯಿರಿಸಿಕೊಂಡು ತಮ್ಮ ನಿಲುವುಗಳನ್ನು ಮಂಡಿಸುತ್ತಾರೆ. ಇದಕ್ಕಾಗಿ ಅವರು ಹಲವು ನೆಲೆಗಳಿಂದ ತಾತ್ವಿಕತೆಯ ಚೌಕಟ್ಟುಗಳನ್ನು ಪಡೆದುಕೊಳ್ಳುತ್ತಾರೆ. ಈ ಚೌಕಟ್ಟುಗಳನ್ನು ಪಡೆದುಕೊಳ್ಳುವಾಗ ಕೇವಲ ಆ ತಾತ್ವಿಕ ಚೌಕಟ್ಟಿನ ಹೊಸತನದ ಸೆಳೆತ ಮಾತ್ರ ಮುಖ್ಯವಾಗದೆ ಕನ್ನಡದ ಸಂದರ್ಭದಲ್ಲಿ ಆ ತಾತ್ವಿಕ ಚೌಕಟ್ಟಿನ ಔಚಿತ್ಯವನ್ನೂ ಅವರು ಗಮನಿಸುತ್ತಾರೆ ಎನ್ನುತ್ತಾರೆ.

About the Author

ಮೇಟಿ ಮಲ್ಲಿಕಾರ್ಜುನ
(15 August 1970)

ಶಿವಮೊಗ್ಗಾದ ಸಹ್ಯಾದ್ರಿ ಆರ್ಟ್ಸ್ ಕಾಲೇಜಿನ ಭಾಷಾಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಮೇಟಿ ಮಲ್ಲಿಕಾರ್ಜುನ ಅವರು ನುಡಿ ಚಿಂತಕರೆನಿಸಿಕೊಂಡಿದ್ದಾರೆ. ಮೂಲತಃ ಬಾಗಲಕೋಟೆಯವರಾದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತೆಂಕಣದ ನುಡಿಗಳು ಮತ್ತು ಇಂಗ್ಲಿಶ್, ಕರ್ನಾಟಕ ಸಬಾಲ್ಟ್ರನ್ ಓದು ಸಂಪುಟಗಳು, ಕೆವೈಎನ್ ನಾಟಕಗಳ ಓದು ‘ಆಟ-ನೋಟ’ ಅವರ ಸಂಪಾದಿತ ಕೃತಿಗಳು. ...

READ MORE

Related Books