'ಸುರಧೇನು' ಶ್ರೀ ಮಹಾದೇವ ಬಸರಕೋಡ ಅವರ ವಿವಿಧ ವಿಷಯಗಳ ಮೇಲೆ 'ಕ್ಷ' ಕಿರಣ ಬೀರುವ ಅಮೂಲ್ಯ ಲೇಖನಗಳ 24ರ ಕಟ್ಟು. 'ಸುರಧೇನು' ಬೇಡಿದುದನ್ನು ಕೊಡುವ ದೇವಲೋಕದ ಗೋವು ಎಂಬುದು ಪೌರಾಣಿಕ ಕಲ್ಪನೆ. ಆದರೆ ಅದನ್ನು ನಮ್ಮಲ್ಲಿನ ಆಕಳುಗಳಲ್ಲಿ ಕಂಡು, ಅದರ ಸದುಪಯೋಗಪಡಿಸಿಕೊಂಡವರು ನಮ್ಮ ಹಿರಿಯರು. ಹಾಗೆಯೇ ಶ್ರೀಮಹಾದೇವರ ಈ 'ಸುರಧೇನು' ಹೊತ್ತಗೆಯ ಲೇಖನಗಳು. ಸಮಾಜಕ್ಕೆ ನೀಟಾದ ಜೀವನಕ್ಕೊಂದು 'ಪಯನ' ಸುರಧೇನುವಿನ ಕ್ಷೀರಧಾರೆಯಿಂದ ಸದ್ಭಾವನೆ. ಸಹಬಾಳ್ವೆ, ಶಾಂತಿ ಸ್ಮರಣೆ, ಸಂತೃಪ್ತಿಯ ಪಂಚಗವ್ಯಗಳು ಸಮಾಜಕ್ಕೆ ಸಂಜೀವಿನಿಯಾಗಬಲ್ಲವು.
ಮೂಲತಃ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಬೇನಾಳ ಗ್ರಾಮದವರಾದ ಬರಹಗಾರ ಮಹಾದೇವ ಬಸರಕೋಡ ಅವರು ಜನಿಸಿದ್ದು 1972 ಜೂನ್ 14ರಂದು. ನಿಡಗುಂದಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಇಲಕಲ್ಲಿನ ಎಸ್.ಆರ್. ಕಂಠಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ಹಾಗೂ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಕನ್ನಡ ಸಾಹಿತ್ಯ ಆಸಕ್ತಿ ಕ್ಷೇತ್ರ. ಮಹಾದೇವ ಅವರ ಪ್ರಮುಖ ಕೃತಿಗಳೆಂದರೆ ಬದುಕು ಬೆಳಕು, ತಮಂಧ ಘನ ಕಳೆದು (ಕವನ ಸಂಕಲನ), ಒಡಲುಗೊಂಡವ (ವಚನ ಸಾಹಿತ್ಯ), ಹಸಿವೆಂಬ ಹೆಬ್ಬಾವು, ವರ್ತಮಾನದಲ್ಲಿ ನಿಂತು ...
READ MORE