ಲೇಖಕಿ ಗಾಯತ್ರಿ ರಾಜ್ ಅವರ ಬ್ಯೂಟಿಫುಲ್ ಲೈಫ್ ಕೃತಿಯು ಲೇಖನಗಳ ಸಂಗ್ರಹವಾಗಿದೆ. ಗಾಳಿ ಪಟ ಎತ್ತರಕ್ಕೆ ಹಾರಲು ಸೂತ್ರ ಎಷ್ಟು ಮುಖ್ಯವೋ ಹಾಗೆ ಲೈಫು ಬ್ಯುಟಿಫುಲ್ ಆಗಿಸಲು ಕೆಲವೊಂದು ಸೂತ್ರಗಳು ಅಷ್ಟೇ ಮುಖ್ಯ. ಅವು ಯಾವುವು ಎಂಬುದನ್ನು ಲೇಖಕಿ ಗಾಯತ್ರಿಯವರು ಈ ಪುಸ್ತಕದಲ್ಲಿ ತಿಳಿಸಿದ್ದಾರೆ. ಲೈಫ್ ಸ್ಟೈಲ್,ದಾಂಪತ್ಯ, ಟೀನೇಜ್,ಪೇರೆಂಟಿಂಗ್, ಟೇಕ್ ಕೇರ್, ಎಂದು ವಿಂಗಡಿಸಿ ಅವುಗಳಿಗೆ ಚಿಕ್ಕ ಪುಟ್ಟ ಕಥೆ ಹೇಳುತ್ತಾ, ಅಲ್ಲಿ ಸರಳ ಪರಿಹಾರ ಸೂಚಿಸಿದ್ದಾರೆ.
ಲೇಖಕಿ, ಕತೆಗಾರ್ತಿ ಗಾಯತ್ರಿ ರಾಜ್ ಮೂಲತಃ ದಾವಣಗೆರೆಯವರು. ವಿಜ್ಞಾನ ವಿದ್ಯಾರ್ಥಿಯಾದರು ಅವರು ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಅವರ ಕತೆಗಳು ಸುಧಾ, ತರಂಗ, ಕರ್ಮವೀರದಲ್ಲಿ ಪ್ರಕಟಗೊಂಡಿದ್ದು ವಿಜಯಕರ್ನಾಟಕ, ಪ್ರಜಾವಾಣಿ, ಉದಯವಾಣಿಯಲ್ಲಿ ನಿಯಮಿತವಾಗಿ ಲೇಖನ ಪ್ರಕಟಣೆ ಕಾಣುತ್ತಿವೆ. ಸಂಪದ ಸಾಲು ಎಂಬ ಪತ್ರಿಕೆಯಲ್ಲಿ ಒಂದು ವರ್ಷದಿಂದ "ಹೆಣ್ಣೆ ಬದುಕು ಸುಂದರ ಕಣೆ" ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ಅವರ ಕತಾ ಸಂಕಲನ ‘ಬಣ್ಣದ ಜೋಳಿಗೆ’ ಇತ್ತಿಚೆಗೆ ಪ್ರಕಟವಾಗಿದೆ. ...
READ MORE