ಸಮಕಾಲೀನ ರಾಜಕಾರಣದ ಮಾಹಿತಿಗಳಿಗೆ ಪೂರಕವಾದ ಸರಳ ಲೇಖನಗಳು ಇಲ್ಲಿವೆ. ರಾಜಕೀಯ ವಿಶ್ಲೆಷಣಾತ್ಮಕ ಲೇಖನಗಳನ್ನು ಬಿಡಿ ಬಿಡಿಯಾಗಿ ಬರೆದವುಗಳು, ಮುಂದೆ ಮಾರ್ಪಾಟಾಗಿ ಪುಸ್ತಕ ರೂಪವಾಗಿದೆ. ಇಲ್ಲಿಯ ಒಂದು ವಿಶೇಷತೆ ಎಂದರೆ, ಯಾವುದೇ ಪಕ್ಷದ ವಕ್ತಾರನಾಗದೇ, ಎಲ್ಲ ರಾಜಕೀಯ ಪಕ್ಷಗಳ ಪರಿಧಿಯಿಂದ ಹೊರ ನಿಂತು ಬರೆದಿರುವ ಲೇಖನಗಳು ಇಲ್ಲಿವೆ.
ಕವಿ,ಕತೆಗಾರ, ರಾಜಕೀಯ ವಿಶ್ಲೇಷಕ ಕು.ಸ.ಮಧುಸೂದನ ಅವರು 1963ರಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಜನಿಸಿದರು. ಮಾತೃಭಾಷೆ ಮಲೆಯಾಳಂ. ಆದರೂ, ಓದಿದ್ದು ಬರೆದಿದ್ದು ಮಾತ್ರ ಕನ್ನಡದಲ್ಲಿಯೇ. ಸರ್ಕಾರಿ ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ನಿರೀಕ್ಷಕರಾಗಿ 30 ವರ್ಷ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದರು. ಇದೀಗ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ರಂಗೇನಹಳ್ಳಿ(ಮುಡುಗೋಡು) ಗ್ರಾಮದಲ್ಲಿನೆಲೆಸಿದ್ದಾರೆ. ’ಅಸಹಾಯಕ ಆತ್ಮಗಳು’ ಕಥಾ ಸಂಕಲನ ರಚಿಸಿದ್ದು, ’ದುರಿತ ಕಾಲದ ದನಿ” ಅವರ ಕವನ ಸಂಕಲನ. ಸಮಕಾಲೀನ ರಾಜಕೀಯ ವಿದ್ಮಮಾನಗಳ ವಿಶ್ಲೇಷಣೆ ಒಳಗೊಂಡ ’ಮಣ್ಣಿನ ಕಣ್ಣು ಭಾಗ - 1 ಮತ್ತು 2' ನ್ನು ಪ್ರಕಟಿಸಿದ್ದಾರೆ ...
READ MORE