ಲೇಖಕಿ ರಂಜನಾ ನಾಯಕ ಅವರ ಕೃತಿ ’ಕಾರಂತ್ ನೆನಪಿನ ಕಾರವಾನ್’. 66ನೇ ಕನ್ನಡ ರಾಜ್ಯೋತ್ಸವದ ವೇಳೆಯಲ್ಲಿ ಸಪ್ನ ಬುಕ್ ಹೌಸ್ ಪ್ರಕಾಶನದ ಮೂಲಕ ತೆರೆ ಕಂಡ ಕೃತಿಯಿದೆ. ಈ ಕೃತಿಗೆ ಕವಿ ಎಚ್.ಎಸ್. ವೆಂಕಟೇಶ ಮೂರ್ತಿ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ.
ರಂಜನಾ ನಾಯಕ ಅವರು ಹುಟ್ಟಿದ್ದು 21-01-1949 ಧಾರವಾಡದಲ್ಲಿ. ಎಂ.ಎಸ್ಸಿ ಪದವೀಧರೆಯಾದ ಅವರು ‘ಕೈದಿಗಳು, ಕಾಲಿನಡಿಯಲ್ಲಿ ಮೋಡ, ಪ್ರೀತಿ ಆವಿಯಾಗುವ ಮುನ್ನ’ ಎಂಬ ಕಾವ್ಯ ಸಂಕಲನಗಳು, ‘ತೆರೆ ಸರಿದಾಗ’ – ನಾಟಕ, ‘ಭಾಗೀರಥಿ ಬಾಯಿ ಪುರಾಣಿಕ’ ಹಾಗೂ ‘ಗೀತಾ ಕುಲಕರ್ಣಿ’ ಅವರ ಜೀವನ ಚರಿತ್ರೆಯನ್ನು ಬರೆದಿದ್ದಾರೆ. ಪ್ರಸಿದ್ಧ ಸ್ತ್ರೀವಾದಿ ಲೇಖಕಿ, ಧಾರವಾಡದ ಹಿರಿಯಕ್ಕ ಗೀತಾ ಕುಲಕರ್ಣಿ ಅವರ ಬದುಕು ಬರಹಗಳ ಕುರಿತಾದ ಕೃತಿಯನ್ನು ರಚಿಸಿರುವ ಶ್ರೀಮತಿ ರಂಜನಾ ನಾಯಕ ಅವರು ಗೀತಾ ಕುಲಕರ್ಣಿಯವರ ಮಗಳು ಹಾಗೂ ಸಂಘಟನೆಯಲ್ಲೂ, ಸಾಹಿತ್ಯ ಕ್ಷೇತ್ರದಲ್ಲಿಯೂ ಸಾಧನೆ ಮಾಡಿರುವ ಪ್ರತಿಭಾವಂತ ಲೇಖಕಿ. ಧಾರವಾಡದಲ್ಲಿ ಹುಟ್ಟಿ ಬೆಳೆದು ಕರ್ನಾಟಕ ವಿಶ್ವವಿದ್ಯಾಲಯದಿಂದ ...
READ MORE