ರಾಜಕಾರಣದಲ್ಲಿ ನಿಂಬೆ ಹಾಗಲ

Author : ರವೀಂದ್ರ ಭಟ್ಟ

Pages 232

₹ 250.00




Year of Publication: 2022
Published by: ಅಂಕಿತ ಪುಸ್ತಕ
Address: ಗಾಂಧಿ ಬಜಾರ್‌ ಮುಖ್ಯ ರಸ್ತೆ, ಬಸವನಗುಡಿ ಬೆಂಗಳೂರು 560004
Phone: 9019190502

Synopsys

ನಿಂಬೆ ಹಾಗಲ ಕೃತಿ ರವೀಂದ್ರ ಭಟ್ಟ ಐನಕ್ಕೆ ಅವರ ಬರಹಗಳ ಸಂಕಲನವಾಗಿದೆ. ಇರುವುದನ್ನು ಇದ್ದಂತೆಯೇ ಹೇಳುತ್ತ, ಒಳಿತು ಕೆಡುಕುಗಳನ್ನು ಎಂಗಡಿಸಿ ನಿರೂಪಿಸುವ ವಿಧಾನವನ್ನು ಈ ಕೃತಿಯುದ್ದಕ್ಕೂ ಕಾಣಬಹುದಾಗಿದೆ. ಏಕಮುಖ ಅಭಿಪ್ರಾಯದ ಬದಲು ಮತ್ತೊಂದು ಮಗ್ಗುಲ ಸತ್ಯವನ್ನು ಕಾಣುವ ಕಣ್ಣು ರವೀಂದ್ರ ಭಟ್ಟರ ಬರಹಗಳಲ್ಲಿದೆ. ಪುಸ್ತಕ ಬರಗೂರು ರಾಮಚಂದ್ರಪ್ಪ ಅವರ ಬೆನ್ನುಡಿಯಲ್ಲಿ ತಿಳಿಸಿದ್ದಾರೆ. ಈ ಪುಸ್ತಕದಲ್ಲಿ  ಖೆಡ್ಡಾದಲ್ಲಿ ಬಿದ್ದ ಪ್ರತಿಪಕ್ಷಗಳು ,ಆಯಿ ಆಗಲಿ ಬೊಮ್ಮಾಯಿ, ಮಂತ್ರಿಯೆಂಬುವ ಮೊರೆವ ಹುಲಿ, ಅಯ್ಯೋ ರಾಮ ಮತ್ತೆ ಆಯಾರಾಮ, ಮೌಲ್ಯ: ಕಳೆದಲ್ಲೇ ಹುಡುಕೋಣ ,ಎಂಥಾ ಮೋಜಿನ ಕುದುರಿ ,'ಗುರು' ಲಘುವಾದರೆ ಹೇಗೆ ಸ್ವಾಮಿ ಕಸಾಪ ಅಂಗಳದಲ್ಲಿ ಕಮಲದ ಕಮಟು,ಪ್ರತಿಜ್ಞೆ ಎಂಬ ಪಾಪದ ಪಾಪ!, ಪ್ರೀತಿಯ ಅಪ್ಪುಗೆಗೆ ಕಾಯ್ದೆ ಬೇಡವೇ?, ಮಳೆ ಬಂದು ಬಣ್ಣ ಬಯಲಾಯ್ತು ಇದೆಂಥಾ ಪ್ರಜಾಪ್ರಭುತ್ವ ಸ್ವಾಮಿ, ಮತದಾರನೊಬ್ಬನೇ ವೆಂಕಟರಮಣ, ನಾಮದ ಬಲವೊಂದಿದ್ದರೆ ಸಾಲದು ಗಡ್ಡಕ್ಕೆ ಬೆಂಕಿ ಬಿದ್ದಿದೆ, ಟೊಂಕ ಕಟ್ಟುವವರಿಲ್ಲ ಸಿ.ಡಿ. ಕೇಡಿಗಳ ನಡುವೆ ಮಾನಗೇಡಿಗಳು ಸಂತೋಷಕ್ಕೆ ಪಾಠ ಸಂತೋಷಕ್ಕೆ ಇವರು ಎಂಥಾ ನಾಯಕರಯ್ಯಾ  ಆರುವ ಮುನ್ನ ಏರುವ ಬೆಂಕಿ ಓದು ಹವ್ಯಾಸ, ಮೊಬೈಲ್ ಚಟ ಶ್ವಾಸ ಉಳಿಸಲಷ್ಟೇ ಅವಿಶ್ವಾಸ 'ಗಾಂಧಿ' ಬಜಾರ್‌ನಲ್ಲಿ ಏಕಾಂಕ ಬೇಕು, ಮಾತು ತಪ್ಪದ ಮಗ ರಾಜಕಾರಣಿಗಳ ಲೇಖನ ಪ್ರೀತಿ ಕೊರೊನಾ ಕಾಲದ ಕರ್ಕಶ ಹೀಗೆ 56 ಪರಿವಿಡಿಗಳನ್ನು ಹೊಂದಿದೆ. 

 

About the Author

ರವೀಂದ್ರ ಭಟ್ಟ
(07 July 1967)

ಹಿರಿಯ ಪತ್ರಕರ್ತ, ಲೇಖಕ ರವೀಂದ್ರ ಭಟ್ಟ ಅವರು ಶಿರಸಿಯ ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್.ಸಿ. ಪದವಿ ಪಡೆದಿದ್ದಾರೆ. ಜೊತೆಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.  1990ರಲ್ಲಿ ಸಂಯುಕ್ತ ಕರ್ನಾಟಕದಿಂದ ವೃತ್ತಿ ಆರಂಭಿಸಿದ ಅವರು ನಂತರ ಕನ್ನಡಮ್ಮ, ಅಭಿಮಾನಿ, ಅರಗಿಣಿ, ಈ ಸಂಜೆ, ಉದಯವಾಣಿಗಳಲ್ಲಿ ಸೇವೆ ಸಲ್ಲಿಸಿದ್ದು, 1995ರಿಂದ ಪ್ರಜಾವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.  ‘ಇವರೇ ಬರಮಾಡಿಕೊಂಡ ಬರ’, ‘ಹೆಜ್ಜೇನು’ (ಆದಿವಾಸಿ ನಾಯಕಿ ಜಾಜಿ ತಿಮ್ಮಯ್ಯ ಅವರ ಜೀವನ ಚರಿತ್ರೆ), ‘ಬದುಕು ಮರದ ಮೇಲೆ’, ‘ಮೂರನೇ ಕಿವಿ’, ‘ಸಂಪನ್ನರು’, ‘ಅಕ್ಷಯ ನೇತ್ರ’, ...

READ MORE

Related Books