`ಸಿಂಗಾಪುರ’ ವಿಶ್ವೇಶ್ವರ ಭಟ್ ಅವರ ಕೃತಿಯಾಗಿದೆ. ಇದಕ್ಕೆ ಲೇಖಕರ ಬೆನ್ನುಡಿ ಬರಹವಿದೆ; ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನಾನು ಸಿಂಗಾಪುರಕ್ಕೆ ಅದಕ್ಕಿಂತ ಹೆಚ್ಚು ಸಲ ಕೆಲಸ, ಪ್ರವಾಸ ಅಥವಾ ಅನ್ಯ ಕಾರಣಕ್ಕಾಗಿ ಭೇಟಿ ನೀಡಿದ್ದಿರಬಹುದು. ಮುಂದಿನ ಐದೂ ವಿದೇಶ ಪ್ರವಾಸ ಸಿಂಗಾಪುರವೇ ಅಂದರೂ ಸರಿಯೇ. ನನ್ನ ಪಾಲಿಗೆ ಮತ್ತೆ ಮತ್ತೆ ಭೇಟಿ ನೀಡಿದರೂ ಬೋರಾಗದ ಊರು ಅದು. ಅಷ್ಟಕ್ಕೂ ಅದು ದೊಡ್ಡ ಊರೋ, ನಗರವೋ, ದೇಶವೋ, ದ್ವೀಪವೋ, ಗೊತ್ತಿಲ್ಲ. ಮಹಾನಗರವಾಗಿ ಹಳ್ಳಿತನ ಉಳಿಸಿಕೊಂಡಿರುವುದಕ್ಕೆ, ಅಂಥ ತನವನ್ನು ಉಳಿಸಿಕೊಂಡು ಜಾಗತಿಕ ನಗರವಾಗಿರುವುದಕ್ಕೆ ಸಿಂಗಾಪುರ ಯಾವತ್ತೂ ವಿಸ್ಮಯವೇ. ಒಂದು ಕಾಲದಲ್ಲಿ ಸಿಂಗಾಪುರ ಮೀನುಗಾರರ ಊರಾಗಿತ್ತು. ಇಂದು ತಿಮಿಂಗಿಲುಗಳಂಥ ಉದ್ಯಮಿಗಳ ಬೀಡಾಗಿದೆ. ಎಲ್ಲ ಜನ ಮತ್ತು ಎಲ್ಲ ದೇಶಗಳು ಕಲಿಯಲು ಸಿಂಗಾಪುರದಲ್ಲಿ ಬೆಟ್ಟದಷ್ಟಿವೆ. ಎಲ್ಲ ಪ್ರಧಾನಿಗಳು, ಅಧ್ಯಕ್ಷರು ತಮ್ಮ ದೇಶವನ್ನು ಸಿಂಗಾಪುರದಂತೆ ಮಾಡುತ್ತೇವೆ ಎಂದು ಹೇಳುತ್ತಾರೆ. ಅವರೆಲ್ಲರಿಗೂ ಬೆಂಚ್ ಮಾರ್ಕ್ ಅಂದ್ರೆ ಸಿಂಗಾಪುರ. ಹಾಗಾದರೆ ಸಿಂಗಾಪುರದಲ್ಲಿ ಏನಿದೆ? ಅದೇ ಈ ಕೃತಿಯ ಹೂರಣ. ಇದು ಪ್ರವಾಸಿ ಕಥನವಲ್ಲ, ಸಿಂಗಾಪುರವನ್ನು ವಿಜೃಂಭಿಸುವ ಬೆರಗಿನ ನೋಟವೂ ಅಲ್ಲ. ಇವು ನಾನು ಆಗಾಗ ಅಲ್ಲಿಗೆ ಹೋದಾಗ ಮಾಡಿಕೊಂಡ ಕೆಲವು ಟಿಪ್ಪಣಿಗಳು. ನೋಟಕ್ಕೆ ದಕ್ಕಿದ ನೋಟ್ಸ್ ಗಳು. ಅಲ್ಲಿಗೆ ಹೋಗದವರಿಗೆ ಇಲ್ಲಿನ ವಿಷಯ ಹೊಸತು. ಹೋದವರಿಗೂ ಅನೇಕ ಹೊಳಹುಗಳು ಸಿಗಬಹುದು ಎಂಬುವುದನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ವಿಶ್ವೇಶ್ವರ ಭಟ್ ಅವರು ಉತ್ತರಕನ್ನಡ ಜಿಲ್ಲೆಯ ಕುಮಟಾದ ಮೂರೂರಿನವರು. ಓದಿದ್ದು ಎಂ.ಎಸ್ಸಿ. ಹಾಗೂ ಎಂ.ಎ. ನಾಲ್ಕು ಚಿನ್ನದ ಪದಕ ವಿಜೇತರು, ಇಂಗ್ಲೆಂಡಿನಲ್ಲಿ ಪತ್ರಿಕೋದ್ಯಮದಲ್ಲಿ ಉನ್ನತ ವ್ಯಾಸಂಗ, ಸಂಯುಕ್ತ ಕರ್ನಾಟಕ, ಕನ್ನಡಪ್ರಭದಲ್ಲಿ ಉಪಸಂಪಾದಕರಾಗಿ ವೃತ್ತಿ ಜೀವನ ಆರಂಭ, ವಿಜಯ ಕರ್ನಾಟಕ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಚಾನಲ್‌ನ ಪ್ರಧಾನ ಸಂಪಾದಕ, ಏಷಿಯನ್ ಕಾಲೇಜ್ ಆಫ್ ಜರ್ನಲಿಸಮ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್, ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಖಾತೆ ಸಚಿವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ, “ವಿಶ್ವವಾಣಿ' ದಿನಪತ್ರಿಕೆಯ ಪ್ರಧಾನ ಸಂಪಾದಕರು. 'ನೂರೆಂಟು ವಿಶ್ವ, 'ಇದೇ ಅಂತರಂಗ ಸುದ್ದಿ' ...
READ MORE