ಖ್ಯಾತ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರ ಕೃತಿ-ಭಾರತೀಯತೆ (ಲಿಂಗಾಯತ: ಹಿಂದೂ). ಲಿಂಗಾಯತ ಒಂದು ಪ್ರತ್ಯೇಕ ಧರ್ಮ, ಹಿಂದೂ ವಿರೋಧಿಯಾಗಿದ್ದು. 12ನೇ ಶತಮಾದ ಶರಣರ ಆಶಯವೇ ಇಡೀ ಧರ್ಮದ ಸಾರ ಎಂದೆಲ್ಲ ಲಿಂಗಾಯತರು ವಾದಿಸುತ್ತಿದ್ದರೆ, ಲಿಂಗಾಯತ ಎಂಬುದು ಹಿಂದೂ ಧರ್ಮದ ಭಾಗವೇ ಆಗಿದೆ ಎಂಬ ವಾದವೂ ಮತ್ತೊಂದೆಡೆ. ಬೇರೆ ಬೇರೆ ಧರ್ಮಕ್ಕೆ ಕಿತ್ತಾಡಿದಾಗ ‘ಭಾರತಿಯತೆ’ ಎಂಬ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ ಎಂಬ ಆತಂಕವೂ ಇದೆ. ಆದರೆ, ಧರ್ಮಕ್ಕಾಗಿ ಕಿತ್ತಾಡಿದರೆ ಜಾತ್ಯತೀತ’ ಪರಿಕಲ್ಪನೆಗೆ ಬೆಲೆ ಏಲ್ಲಿ? ಎಂಬ ಪ್ರಶ್ನೆಯೂ ಇದೆ. ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ ಲೇಖಕರು ನಡೆಸಿದ ಜಿಜ್ಞಾಸೆಯೇ ಈ ಕೃತಿ.
ಹಿರಿಯ ಸಾಹಿತಿ - ಸಂಶೋಧಕರಾದ ಎಂ. ಚಿದಾನಂದ ಮೂರ್ತಿ ಅವರು ಶಿವಮೊಗ್ಗ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರಿನಲ್ಲಿ ಜನಿಸಿದರು. ತಂದೆ ಕೊಟ್ಟೂರಯ್ಯ ಮತ್ತು ತಾಯಿ ಪಾರ್ವತಮ್ಮ. 1931ರ ಮೇ 10 ರಂದು ಜನಿಸಿದ ಅವರು ನೀತಿಗೆರೆ, ಹಿರೇಕೋಗಲೂರು, ಸಂತೇಬೆನ್ನೂರುಗಳಲ್ಲಿ ತಮ್ಮ ವಿದ್ಯಾಭ್ಯಾಸವನ್ನು ನಡೆಸಿದರು. ನಂತರ ದಾವಣಗೆರೆಯಲ್ಲಿ ಪ್ರೌಢಶಾಲೆ-ಇಂಟರ್ ಮೀಡಿಯಟ್ ಶಿಕ್ಷಣ (1950) ಮುಗಿಸಿ, ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಬಿ.ಎ. (ಆನರ್ಸ್) ಪದವಿ (1953) ಪಡೆದರು. ಅಧ್ಯಾಪಕರಾಗಿ ನೇಮಕಗೊಂಡರು. ನಂತರ ಎಂ. ಎ. ಪದವಿ (1957) ಪ್ರಥಮ ರ್‍ಯಾಂಕ್‌ನೊಂದಿಗೆ ಗಳಿಸಿದರು. 'ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ' ಎಂಬ ...
READ MORE