‘ಚನ್ನಪ್ಪ ಉತ್ತಂಗಿಯವರ ಬರಹಗಳು’ ಕೃತಿಯನ್ನು ವರದರಾಜ ಹುಯಿಲಗೋಳ ಅವರು ಸಂಪಾದಿಸಿದ್ದಾರೆ. ಉತ್ತಂಗಿ ಚನ್ನಪ್ಪನವರು 'ತಿರುಳ್ಗನ್ನಡದ ತಿರುಕ' ಎಂದು ಕರೆಯಿಸಿಕೊಂಡು 'ಸರ್ವಜ್ಞನ ವಚನ'ಗಳ ಸಂಪಾದನೆಗಾಗಿ ಖ್ಯಾತರಾದವರು. 'ಸರ್ವಜ್ಞನ ಪದಗಳನ್ನು' ಪ್ರಸಿದ್ಧಿಪಡಿಸಿದ ಕೀರ್ತಿ ರೆವರೆಂಡ್ ಫಾದರ್ ಉತ್ತಂಗಿ ಚನ್ನಪ್ಪನವರಿಗೆ ಸಲ್ಲುತ್ತದೆ. ಅವರ ಮಹತ್ವದ ಬರಹಗಳು ಓದುಗರಿಗೆ ದೊರಕುವಂತೆ ವರದರಾಜ ಹುಯಿಲಗೋಳ ಅವರು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಗಣ್ಯ ಕೊಡುಗೆ ನೀಡಿರುವ ವರದರಾಜರು ಹುಟ್ಟಿದ್ದು ( ಜನನ: 12-08-1917) ವಿಜಾಪುರ ಜಿಲ್ಲೆಯ ಮುದ್ದೇ ಬಿಹಾಳದಲ್ಲಿ. ತಂದೆ ರಾಜೇರಾಯರು, ತಾಯಿ ಗೋದಾವರಿಬಾಯಿ. ರಂ.ಶ್ರೀ. ಮುಗಳಿಯವರು ಇವರ ಸೋದರಮಾವನಾದರೆ ಆಲೂರು ವೆಂಕಟರಾಯರು ಮಾವನವರು. ಪ್ರಾರಂಭಿಕ ಶಿಕ್ಷಣ ಮುದ್ದೇ ಬಿಹಾಳದಲ್ಲಿ ಹಾಗೂ ಹೈಸ್ಕೂಲು ಶಿಕ್ಷಣವನ್ನು ಗದಗದಲ್ಲಿ ಪೂರೈಸಿದರು. ಆನಂತರ ಸಾಂಗ್ಲಿಯ ವಿಲಿಂಗ್‌ಡನ್ ಕಾಲೇಜು ಸೇರಿದರು. 1943ರಲ್ಲಿ ಬಿ.ಎ. (ಆನರ್ಸ್) ಪದವಿ ನಂತರದಲ್ಲಿ ಎಂ.ಎ. ಹಾಗೂ ಬಿ.ಟಿ. ಪದವಿ ಪಡೆದರು. 1969ರಲ್ಲಿ ‘ದುರ್ಗಸಿಂಹನ ಪಂಚತಂತ್ರ ಸಮೀಕ್ಷೆ’ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪಡೆದರು. ಬಿ.ಎ. (ಆನರ್ಸ್) ಪದವಿಯ ನಂತರ ಕೆಲಕಾಲ ...
READ MORE