'ಮಾರಿಕಣಿವೆ' (ವಾಣಿವಿಲಾಸ ಸಾಗರ ನಿರ್ಮಾಣದ ಕತೆ')ಯು ಈ ಬರದ ಸೀಮೆಯಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 'ವಾಣಿವಿಲಾಸ ಸಾಗರ'ವನ್ನು ಕಟ್ಟಲು ತೊಡಗಿದ ಇಂಜಿನಿಯರಿಂಗ್ ಸಾಹಸದ ಕತೆಯನ್ನು ಹೇಳುತ್ತದೆ. ಈ ವರದಿಯನ್ನು ಸಿದ್ಧಪಡಿಸಿದವರು ಕರ್ನಾಟಕ ಶಾಸನ ಪಿತಾಮಹರೆಂದು ಖ್ಯಾತರಾದ ಬಿ. ಎಲ್. ರೈಸ್ ಅವರ ಮಗ ಹೆಚ್. ಡಿ. ರೈಸ್ ಅವರು ಎಂಬುದು ಹೆಮ್ಮೆಯ ವಿಷಯ. ಈ ಡ್ಯಾಮ್ ನಿರ್ಮಾಣದಲ್ಲಿ ಇಂಜಿನಿಯರ್ ಆಗಿ ಪ್ರಮುಖ ಪಾತ್ರವಹಿಸಿದ್ದ ಅವರು ಅದರ ಪ್ರತಿ ಹಂತಗಳನ್ನು, ಸಂಬಂಧಿಸಿದ ಎಲ್ಲಾ ತಾಂತ್ರಿಕ ವಿವರಗಳೊಂದಿಗೆ ಡ್ರಾಯಿಂಗ್ಸ್ ಮತ್ತು ತುಂಬಾ ಅಪರೂಪದ ಛಾಯಾಚಿತ್ರಗಳೊಂದಿಗೆ ವಿಸ್ತತವಾಗಿ ನೀಡಿದ್ದಾರೆ. ಅನೇಕ ತಾಂತ್ರಿಕ ಮತ್ತು ಪಾಲಿಭಾಷಿಕ ಶಬ್ದಗಳಿಂದ ಕೂಡಿದ ಈ ವರದಿ ರೂಪದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವದ ದಾಖಲೆಯನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಅತ್ಯಂತ ಸರಳವಾದ, ಆಕರ್ಷಕವಾಗಿ ಕನ್ನಡಕ್ಕೆ ತಂದಿರುವ ಎಂ.ಜಿ.ಆರ್. ಅವರ ಪ್ರಯತ್ನ ಅಭಿನಂದನಾರ್ಹ. ಮಾಲಕಣಿವೆ ಡ್ಯಾಂಗೆ ಸಂಬಂಧಿಸಿದ ಅನೇಕ ಪೂರಕ ಮಾಹಿತಿಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿದ್ದು ವರದಿಗೆ ಸಮಗ್ರತೆ ಪ್ರಾಪ್ತವಾಗಿದೆ ಎನ್ನುತ್ತಾರೆ ಮೀರಾಸಾಬಿಹಳ್ಳಿ ಶಿವಣ್ಣ.
ಎಂ.ಜಿ. ರಂಗಸ್ವಾಮಿ ಅವರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಮಲ್ಲಪ್ಪನಹಳ್ಳಿ ಗ್ರಾಮದಲ್ಲಿ 25 ,03,1962 ರಂದು ಜನಿಸಿದರು. ತಂದೆ ಆರ್. ಗುಡುವಯ್ಯ, ತಾಯಿ ಎಂ.ರಂಗಮ್ಮ. ಸ್ವಗ್ರಾಮ ಹಾಗೂ ಚಿತ್ರದುರ್ಗದಲ್ಲಿ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣವನ್ನು ಪೂರೈಸಿ, ಮೈಸೂರು ಯುವರಾಜ ಕಾಲೇಜಿನಲ್ಲಿ ಬಿ.ಎಸ್ಸಿ, ಪದವಿ, ಮಾನಸ ಗಂಗೋತ್ರಿಯಲ್ಲಿ ಡಿಪ್ಲೋಮಾ-ಇನ್-ಇಂಗ್ಲಿಷ್ ಹಾಗೂ ಆಂಗ್ಲ ಸಾಹಿತ್ಯದಲ್ಲಿ ಎಂ.ಎ. ಪದವಿಯನ್ನು ಪಡೆದರು. ಮೂವತ್ತೈದು ವರ್ಷಗಳ ಕಾಲ ಹಿರಿಯೂರು ತಾಲ್ಲೂಕು ಧರ್ಮಪುರ ಗ್ರಾಮದ ಶ್ರೀಪಂಚಲಿಂಗೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲಭಾಷಾ ಉಪನ್ಯಾಸಕರಾಗಿ ನಂತರ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ಮಾರ್ಚ್ 31, 2022 ರಂದು ನಿವೃತ್ತರಾಗಿದ್ದಾರೆ. ಇವರ ...
READ MORE