`ಓದಿನ ಒಕ್ಕಲು’ ಕೃತಿಯು ರಂಗನಾಥ ಕಂಟನಕುಂಟೆ ಅವರ ಸಾಹಿತ್ಯ ಚಿಂತನೆಯ ಬರೆಹಗಳ ಸಂಕಲನವಾಗಿದೆ. ಓದಿನ ಒಕ್ಕಲು' ಸಾಹಿತ್ಯ ಚಿಂತನೆಯ ಬರೆಹಗಳು, ಸಾಹಿತ್ಯದ ಮೂಲಕ ಸಮಾಜ, ಸಂಸ್ಕೃತಿ, ಅಧಿಕಾರ ರಾಜಕಾರಣ, ಭಾಶೆ, ಜನಪದ ಸಾಹಿತ್ಯ, ಹೆಣ್ಣು ಕಥನಗಳನ್ನು ಒಳಗೊಂಡಂತೆ ಲೋಕದ ಸ್ಥಾಪಿತ ಮೌಲ್ಯಗಳನ್ನು, ಬದುಕಿನ ವಿವಿಧ ಮಗ್ಗುಲುಗಳನ್ನು ಮುಖಾಮುಖಿಯಾಗಲು ಯತ್ನಿಸ ಲಾಗಿದೆ. ಸಾಹಿತ್ಯದ ನೆಲೆಯಲ್ಲಿ ನಿಂತು ಲೋಕಸಂವಾದ ಮತ್ತು ವ್ಯಕ್ತಿಯ ಒಳಸಂವಾದ ನಡೆಸಲಾಗಿದೆ. ಲೋಕಸಂವಾದ ನಡೆಸುತ್ತಲೇ ಸಾಹಿತ್ಯ ಸಂವಾದವನ್ನು ನಡೆಸಲಾಗಿದೆ. ಹೀಗೆ ಸಂವಾದ ನಡೆಸುವ ಹೊತ್ತಿನಲ್ಲಿ ಇದುವರೆಗೂ ಕಟ್ಟಿಕೊಂಡಿರುವ ಕಥನಗಳಲ್ಲಿನ ತಾತ್ವಿಕ ಸಮಸ್ಯೆ ಗಳನ್ನೂ, ಸ್ಥಾಪಿತ ಮೌಲ್ಯಗಳನ್ನು ಎದುರುಗೊಳ್ಳಲು ಯತ್ನಿಸಲಾಗಿದೆ. ನಮ್ಮ ಕೆಲವು ಆಲೋಚನೆಗಳಲ್ಲಿ ಹುದುಗಿರುವ ಅಪಕಲ್ಪನೆಗಳನ್ನು ಬಿಡಿಸಿನೋಡುವ ಕೆಲಸ ಮಾಡಲಾಗಿದೆ.
ಕವಿ, ಲೇಖಕ, ಚಿಂತಕರಾದ ರಂಗನಾಥ ಕಂಟನಕುಂಟೆಯವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಕಂಟನಕುಂಟೆಯಲ್ಲಿ ಪೂರ್ಣಗೊಳಿಸಿದ ರಂಗನಾಥ್ ಅವರು ಸರ್ಕಾರಿ ಪದವಿ ಪೂರ್ಣ ಕಾಲೇಜು ದೊಡ್ಡಬಳ್ಳಾಪುರದಲ್ಲಿ ಪಿಯುಸಿ ಮುಗಿಸಿ, ಶ್ರೀಕೊಂಗಾಡಿಯಪ್ಪ ಕಾಲೇಜಿನಲ್ಲಿ ಐಚ್ಛಿಕ ಕನ್ನಡದಲ್ಲಿ ಪದವಿ ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಎಂ.ಎ ಪದವಿ ಪಡೆದ ಅವರು ಆನಂತರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಜನಭಾಷೆ ಮತ್ತು ಪ್ರಭುತ್ವ ಭಾಷೆಗಳ ನಡುವಿನ ಸಂಘರ್ಷದ ನೆಲೆಗಳು ಎಂಬ ವಿಷಯದಡಿ ತಮ್ಮ ಪಿಎಚ್.ಡಿ ಮುಗಿಸಿದ್ದಾರೆ. ಕಳೆದ ಇಪತ್ತು ವರ್ಷಗಳಿಂದ ಅಧ್ಯಾಪಕರಾಗಿ ...
READ MORE